ಬುಡಕಟ್ಟು ಪ್ರದೇಶ ಮತ್ತು ಮಲ್‌ಕಂಡ್ ಭಾಗದಲ್ಲಿ ಪಾಕಿಸ್ತಾನದ ರಕ್ಷಣಾ ಪಡೆಗಳು ನಡೆಸಿದ ದಾಳಿಗೆ 11 ಉಗ್ರರು ಸಾವನ್ನಪ್ಪಿದ್ದು, 12ಮಂದಿಯನ್ನು ಗುರುವಾರ ಸೆರೆ ಹಿಡಿದಿರುವುದಾಗಿ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಒರಾಕಾಜಿ ಬುಡಕಟ್ಟು ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 11ಮಂದಿ ಉಗ್ರರು ಬಲಿಯಾಗಿದ್ದಾರೆ. ಈ ಸಂದರ್ಭದಲ್ಲಿ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆಯಿತು. ಈ ಸಂದರ್ಭದಲ್ಲಿ ಉಗ್ರರ ಎರಡು ಅಡಗು ತಾಣಗಳನ್ನು ನಾಶಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಟಿವಿ ಚಾನೆಲ್ ವರದಿಯೊಂದು ಹೇಳಿದೆ.
ಮಾಜಿ ತಾಲಿಬಾನ್‌ನ ಪ್ರಾಬಲ್ಯ ಹೊಂದಿದ್ದ ಸ್ವಾತ್‌ನ ಪೆಯೋಚಾರ್ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದ್ದು, ಶಾಗೈನ ಮಿಂಗೋರಾದಲ್ಲಿ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಡಿರ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮದ್ದುಗುಂಡು, ರೈಫಲ್‌ಗಳನ್ನು ಕೂಡ ವಶಪಡಿಸಿಕೊಂಡಿರುವುದಾಗಿ ರಕ್ಷಣಾ ಪಡೆ ಹೇಳಿದೆ.