ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ, ಹಿಂದೂ ಸಮುದಾಯದ ಜನರು ಕೃಷ್ಣ ಜನ್ಮಾಷ್ಠಮಿಯಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಿದರು.
ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಸರಕಾರ ದೇಶದಾದ್ಯಂತ ಸಾರ್ವಜನಿಕ ರಜೆ ಘೋಷಿಸಿದ್ದು, ರಾಷ್ಟ್ರಾಧ್ಯಕ್ಷ ಜಿಲೂರ್ ರೆಹ್ಮಾನ್ ಅವರ ನಿವಾಸದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಢಾಕಾದಲ್ಲಿರುವ ಹಿಂದೂ ಸಮುದಾಯದ ಬಾಂಗ್ಲಾದೇಶ ಸಂಗಬಾದ್ ಸಂಸ್ಥೆಯ ವತಿಯಿಂದ ರಾಜಧಾನಿಯಾದ್ಯಂತ ಸಮಾಜಿಕ -ಸಾಂಸ್ಕ್ರತಿಕ ಹಾಗೂ ಧಾರ್ಮಿಕತೆಯನ್ನು ಸಾರುವ ಹಲವಾರು ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ 2001ರ ಜನಗಣತಿ ಪ್ರಕಾರ 11 ಮಿಲಿಯನ್ ಹಿಂದೂಗಳಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.11.2 ರಷ್ಟು ಜನಸಾಂದ್ರತೆಯನ್ನು ಹೊಂದಿದ್ದಾರೆ.ಭಾರತದಲ್ಲಿ ಇಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ.