ಮಲೇಷ್ಯಾದ ಉತ್ತರ ಪೆನಾಂಗ್ ರಾಜ್ಯದಲ್ಲಿ ಭಾರತೀಯ ಮೂಲಕ್ಕೆ ಸೇರಿದ ಸಮುದಾಯದವರು ನೆಲೆಸಿರುವ ಪುಟ್ಟ ಗ್ರಾಮವೊಂದನ್ನು ನೆಲಸಮಗೊಳಿಸುವ ಕಾರ್ಯಕ್ಕಾಗಿ ಬುಲ್‌ಡೋಜರ್‌ಗಳು ಸಿದ್ದವಾಗಿ ನಿಂತಿದ್ದು ಗ್ರಾಮ ತ್ಯಜಿಸುವಂತೆ ಸ್ಥಳೀಯ ನಿವಾಸಿಗಳಿಗೆ ನೀಡಿದ್ದ ಗಡುವು ಗುರುವಾರ ಮುಕ್ತಾಯಗೊಂಡಿತ್ತು.
ಸುಮಾರು 300 ಮನೆಗಳಿರುವ ಈ ಗ್ರಾಮವನ್ನು ನೆಲಸಮಗೊಳಿಸಿ, ಎರಡು ಮಹಡಿಯ ಕಟ್ಟಡಗಳನ್ನು ನಿರ್ಮಿಸಿ ಹೊಸದಾಗಿ ಅಭಿವೃದ್ಧಿಪಡಿಸಲು ಭೂಮಿಯ ಮಾಲೀಕರು ನಿರ್ಧರಿಸಿದ್ದು, ಇದಕ್ಕೆ ಕೇವಲ ನಾಲ್ಕು ಕುಟುಂಬಗಳು ಮಾತ್ರ ಒಪ್ಪಿಗೆ ಸೂಚಿಸಿವೆ.
ಹಲವು ಶತಮಾನಗಳ ಹಿಂದೆ ಭಾರತದಿಂದ ಇಲ್ಲಿಗೆ ಬಂದು ವಾಸಿಸುತ್ತಿರುವ ಕುಟುಂಬಗಳಿಗೆ ಮತ್ತು ಭೂಮಿ ಮಾಲೀಕರಿಗೆ ಪರಸ್ಪರ ಒಮ್ಮತದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.