ಕ್ಯೂಬಾದ ಮಾಜಿ ರಾಷ್ಟ್ರಾಧ್ಯಕ್ಷ ಫಿಡಲ್ ಕಾಸ್ಟ್ರೋ ತಮ್ಮ 83ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ಆರ್ಥಿಕ ನೀತಿಗಳನ್ನು ಎಂದಿನಂತೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
1959ರಲ್ಲಿ ಕೆರೆಬಿಯನ್ ದ್ವೀಪದಲ್ಲಿ ಕ್ರಾಂತ್ರಿಯ ಕಹಳೆ ಮೊಳಗಿಸಿ ಕಮ್ಯೂನಿಸಂ ಅಧಿಕಾರಕ್ಕೆ ತಂದ ಖ್ಯಾತಿಯನ್ನು ಹೊಂದಿದ ಫಿಡಲ್ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರಿಂದ ದೂರವಾಗಿದ್ದರು. ಕಳೆದ 2008ರಲ್ಲಿ ಅನಾರೋಗ್ಯದಿಂದಾಗಿ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ತಮ್ಮ ಸಹೋದರ ರೌಲ್ ಕಾಸ್ಟ್ರೋ ಅವರಿಗೆ ವಹಿಸಿದ್ದರು.
ಕ್ಯೂಬಾ ದೇಶದಲ್ಲಿ ಕಮ್ಯೂನಿಸಂ ವ್ಯವಸ್ಥೆಯನ್ನು ಅಳಿಸಿಹಾಕಲು, ಅಮೆರಿಕ ಸುಮಾರು 50 ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಿದ್ದರೂ ಕ್ಯೂಬಾ ಶರಣಾಗಲು ಎಂದಿಗೂ ಸಾಧ್ಯವಿಲ್ಲ ಫಿಡಲ್ ಗುಡುಗಿದ್ದಾರೆ.