ಭೂಗತ ಅಪರಾಧಗಳು ಹಾಗೂ 24 ಶಾಲಾ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಚೀನಾದ ಮಾಜಿ ಸಂಸದನನ್ನು ಗಲ್ಲಿಗೇರಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿವೆ.
ಹೆನನ್ ಪ್ರಾಂತ್ಯದ 63 ವರ್ಷ ವಯಸ್ಸಿನ ಮಾಜಿ ಸಂಸದ, ವು ಟಿಯಾನಕ್ಸಿ ಅವರನ್ನು ನನ್‌ಯಾಂಗ್ ನ್ಯಾಯಾಲಯ ವಿಚಾರಣೆ ನಡೆಸಿ, ಅಪರಾಧಗಳು ಸಾಬೀತಾಗಿದ್ದರಿಂದ ಮರಣದಂಡನೆ ಸೂಕ್ತ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಗುರುವಾರ ಗಲ್ಲಿಗೇರಿಸಲಾಗಿದೆ ಎಂದು ವರದಿ ಹೇಳಿದೆ.
ಕಳೆದ 2005-07 ರ ಅವಧಿಯಲ್ಲಿ ಭೂಗತ ಚಟುವಟಿಕೆಗಳು, 24 ಶಾಲಾ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
1992ರಿಂದ ಕಾನೂನು ಬಾಹಿರ ಭೂಮಿ ವರ್ಗಾವಣೆ, ಬ್ಲ್ಯಾಕ್‌ಮೇಲ್ ,ಸಾರ್ವಜನಿಕ ಹಣ ದುರುಪಯೋಗಸೇರಿದಂತೆ ಭೂಗತ ಚಟುವಟಿಕೆಗಳಲ್ಲಿ ಮಾಜಿ ಸಂಸದ ವು ಟಿಯಾನ್‌ಕ್ಸಿ ತೊಡಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ನಾನ್‌ಯಾಂಗ್‌ನ ಮಧ್ಯಂತರ ನ್ಯಾಯಾಲಯ 2007ರ ಡಿಸೆಂಬರ್ 9 ರಂದು ಮರಣದಂಡನೆ ಹಾಗೂ 5 ಲಕ್ಷ ಯುವಾನ್ ದಂಡವನ್ನು ವಿಧಿಸಿ ತೀರ್ಪು ನೀಡಿತ್ತು.