ಇಸ್ಲಾಮಾಬಾದ್, ಶುಕ್ರವಾರ, 14 ಆಗಸ್ಟ್ 2009( 20:10 IST )
ಪ್ರಸಕ್ತ ಸಾಲಿನಲ್ಲಿ ಪಾಕಿಸ್ತಾನದ ನೆಲದಲ್ಲಿ 1,367 ಭಯೋತ್ಪಾದನಾ ಸಂಬಂಧಿ ಘಟನೆಗಳು ನಡೆದಿದ್ದು, ಇದರಲ್ಲಿ 2,686ಜನರು ಬಲಿಯಾಗಿದ್ದಾರೆ. ಅಲ್ಲದೇ 9,321ಮಿಲಿಯನ್ ಆಸ್ತಿಗಳಿಗೆ ನಷ್ಟವಾಗಿರುವುದಾಗಿ ಪಾಕಿಸ್ತಾನ ಒಳಾಡಳಿತ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಸಂಸತ್‌ನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ 67, ಸಿಂಧ್‌ನಲ್ಲಿ 36, ಎನ್‌ಡಬ್ಲ್ಯುಎಫ್‌ಪಿ-544, ಬಲೂಚಿಸ್ತಾನ್-331, ಫೆಡರಲ್ ಕ್ಯಾಪಿಟಲ್ ಪ್ರಾಂತ್ಯದಲ್ಲಿ 09 ಭಯೋತ್ಪಾದನಾ ಘಟನೆಗಳು ನಡೆದಿದೆ.
ಅದೇ ರೀತಿ ಪಂಜಾಬ್‌ನಲ್ಲಿ 240ಮಂದಿ, ಸಿಂಧ್‌ನಲ್ಲಿ 28, ಎನ್‌ಡಬ್ಲ್ಯುಎಫ್‌ಪಿ-1285, ಬಲೂಚಿಸ್ತಾನದಲ್ಲಿ 337, ಇಸ್ಲಾಮಾಬಾದ್ ಕ್ಯಾಪಿಟಲ್ ಪ್ರಾಂತ್ಯದಲ್ಲಿ 73, ಫಾಟಾದಲ್ಲಿ 723ಮಂದಿ ಸಾವನ್ನಪ್ಪಿರುವುದಾಗಿ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ವಿವರಿಸಿದೆ.
ಅಲ್ಲದೇ 2008ರಲ್ಲಿ ದೇಶದಲ್ಲಿ ನಡೆದ ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ 4,811ಮಂದಿ ದೋಷಿತರಾಗಿದ್ದಾರೆ. 2007ರಲ್ಲಿ 5022ಪ್ರಕರಣ ದಾಖಲಾಗಿರುವುದಾಗಿ ಸಚಿವಾಲಯ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದೆ.