ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ನಾಯಕ ಮಸೂದ್ ಅಜರ್‌ನನ್ನು ಭಯೋತ್ಪಾದಕನೆಂದು ಘೋಷಿಸಬೇಕೆಂಬ ಭಾರತದ ಮನವಿಯನ್ನು ಚೀನಾ ಸಾರಸಗಟಾಗಿ ತಳ್ಳಿಹಾಕಿದೆ.
ಭಾರತದ ಮನವಿಗೆ ತಾಂತ್ರಿಕ ಅಡಚಣೆ ಇದೆ ಎಂದು ಚೀನಾ ಹೇಳಿದೆ. ಇದೊಂದು ರಾಜಕೀಯ ನಿರ್ಧಾರವೆಂದು ಭಾರತ ಎಷ್ಟೇ ಮನದಟ್ಟು ಮಾಡಿಕೊಡಲು ಯತ್ನಿಸಿದರೂ ಚೀನಾ ಮಣಿಯಲಿಲ್ಲ.
ಚೀನಾದ ಸರ್ಕಾರ ಸಲಹೆಗಾರ ಡಾಯ್ ಬಿಂಗ್ಟೊ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರ ನಡುವೆ ಕಳೆದ ವಾರಾಂತ್ಯದಲ್ಲಿ ಗಡಿ ವಿಷಯ ಕುರಿತಂತೆ ನಡೆದ ಕೊನೆಯ ಸುತ್ತಿನ ಮಾತುಕತೆ ವೇಳೆ ಅಜರ್ ವಿಷಯ ಪ್ರಸ್ತಾಪವಾಗಿತ್ತು.
ಜೈಶ್ ಎ ಮೊಹಮ್ಮದ್ ಸಂಘಟನೆ ಮತ್ತು ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಲು ಚೀನಾ ಜುಲೈ ತಿಂಗಳಿನಲ್ಲಿ ತಡೆಯೊಡ್ಡಿತ್ತು. ಈ ಬಗ್ಗೆ ವಿವರಣೆ ನೀಡವಂತೆಯೂ ಭಾರತ ಚೀನಾಕ್ಕೆ ಮನವಿ ಮಾಡಿತ್ತು. ಮಸೂದ್ ಭಯೋತ್ಪಾದಕ ಎಂಬ ಬಗ್ಗೆ ಭಾರತ ಸಮರ್ಪಕವಾದ ಮಾಹಿತಿಯನ್ನು ಒದಗಿಸದಿರುವ ಹಿನ್ನೆಲೆಯಲ್ಲಿ ಘೋಷಣೆ ಅಸಾಧ್ಯ ಎಂದು ಚೀನಾ ಪ್ರತಿಕ್ರಿಯಿಸಿತ್ತು.