ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆಯಲ್ಲಿ ಬಂಧಿತರಾದ ಐವರು ಪಾಕಿಸ್ತಾನಿ ವಿದ್ಯಾರ್ಥಿಗಳಿಗೆ ಬ್ರಿಟನ್ ಕೋರ್ಟೊಂದು ಜಾಮೀನು ನಿರಾಕರಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಈಸ್ಟರ್ ಬಾಂಬ್ ಆಂದೋಳನಕ್ಕೆ ಯೋಜಿಸಲು 'ಬಾಲಕಿಯರು ಮತ್ತು ಕಾರುಗಳು' ಕುರಿತ ಸಂಕೇತನಾಮಗಳ ಈಮೇಲ್‌ಗಳನ್ನು ಅವರು ಕಳಿಸಿದ್ದರೆಂದು ನ್ಯಾಯಾಧೀಶರು ಶಂಕಿಸಿದ್ದಾರೆ.
ಬಾಂಬ್ ತಯಾರಿಕೆ ರಾಸಾಯನಿಕಗಳಿಗೆ ಬದಲಿಯಾಗಿ ಹುಡುಗಿಯರ ಹೆಸರುಗಳನ್ನು ಮತ್ತು ದಾಳಿಗೆ ವಿವಾಹ ಎಂಬ ಸಂಕೇತಾಕ್ಷರ ಬಳಸಲು ಯೋಜಿಸಿರುವುದು ಈಮೇಲ್‌ನಿಂದ ಕಂಡುಬರುತ್ತದೆಯೆಂದು ಭದ್ರತಾ ಸೇವೆ ಅಧಿಕಾರಿಗಳು ತಿಳಿಸಿದ್ದಾರೆ. 11 ಪಾಕಿಸ್ತಾನಿಯರು ಮತ್ತು ಒಬ್ಬ ಬ್ರಿಟನ್ ಪೌರರು ಸೇರಿದಂತೆ 12 ಜನ ಶಂಕಿತರಲ್ಲಿ ಐವರು ಸೇರಿದ್ದಾರೆ. ಇವೆರೆಲ್ಲರನ್ನೂ ಕಳೆದ ಏಪ್ರಿಲ್‌ನಲ್ಲಿ ದಾಳಿ ಮಾಡಿ ಬಂಧಿಸಲಾಗಿದ್ದು, ಇದುವರೆಗೆ ಕ್ರಿಮಿನಲ್ ಅಪರಾಧವನ್ನು ಹೂಡಿರಲಿಲ್ಲ.
ಒಂದು ಈಮೇಲ್‌ನಲ್ಲಿ ನಿಕಾ ಅಥವಾ ವಿವಾಹಕ್ಕೆ ಏ.15ರಿಂದ 20ರೊಳಗೆ ಒಳಗೊಳ್ಳುವ ನಾಡಿಯ ಎಂಬ ಬಾಲಕಿಯನ್ನು ಉಲ್ಲೇಖಿಸಲಾಗಿತ್ತು. ಬಾಲಕಿಯರ ಹೆಸರುಗಳು ಸ್ಫೋಟಕ ಸಾಮಗ್ರಿಗಳಿಗೆ ಸಂಕೇತಾಕ್ಷರವಾಗಿದ್ದು, ವಿವಾಹದ ದಿನಾಂಕವು ಯೋಜಿತ ದಾಳಿಯ ದಿನಾಂಕವಾಗಿತ್ತು ಎಂದು ನಿರ್ಧರಿಸಲಾಗಿದೆ.