ರಷ್ಯಾದ ಎರಡು ಸುಖೋಯಿ ಯುದ್ಧವಿಮಾನಗಳು ಆಕಾಶದಲ್ಲೇ ಡಿಕ್ಕಿ ಹೊಡೆದಿದ್ದರಿಂದ ಒಬ್ಬರು ಪೈಲಟ್ ಸತ್ತಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ನಿಗದಿಯಾಗಿದ್ದ ಅಂತಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಅಭ್ಯಾಸ ಮುಗಿಸಿದ ಬಳಿಕ ಈ ದುರ್ಘಟನೆ ಸಂಭವಿಸಿದೆ.
ರಷ್ಯಾದ ನಗರ ಜುಕೋವ್‌ಸ್ಕಿಯಲ್ಲಿ ಸು-27 ಫ್ಲಾಂಕರ್ ಜೆಟ್ಸ್ ವಿಮಾನಗಳು ಮಿಗ್-29 ಸಮರವಿಮಾನಗಳ ಜತೆ ಜಂಟಿ ಅಭ್ಯಾಸ ನಡೆಸಿದ ಬಳಿಕ ಪರಸ್ಪರ ಡಿಕ್ಕಿ ಹೊಡೆದವು. ಜೆಟ್‌ಗಳಲ್ಲಿ ಮೂವರು ಪೈಲಟ್‌ಗಳಿದ್ದು, ರಷ್ಯನ್ ವೈಮಾನಿಕ ಕಸರತ್ತು ಪಡೆಯ ಕಮಾಂಡರ್ ಪ್ಯಾರಾಚ್ಯೂಟ್ ತೆರೆಯಲು ವಿಫಲವಾಯಿತೆಂದು ವಾಯುಪಡೆಯ ವಕ್ತಾರ ಲೆ.ಕರ್ನಲ್ ವ್ಲಾಡಿಮಿಲ್ ಡಿರ್ಕ್ ತಿಳಿಸಿದ್ದಾರೆ.
ಎಂಎಕೆಎಸ್-2000 ವೈಮಾನಿಕ ಕಸರತ್ತಿಗೆ ಅಭ್ಯಾಸ ನಡೆಸುತ್ತಿದ್ದ ವಿಮಾನಗಳಲ್ಲೊಂದು ಎರಡು ಆಸನಗಳ ತರಬೇತಿ ವಿಮಾನವಾಗಿದ್ದು, ಡಿಕ್ಕಿ ಹೊಡೆದ ಬಳಿಕ ಮೂರು ವಿಮಾನಗಳ ಪೈಲಟ್‌ಗಳು ಪ್ಯಾರಾಚ್ಯೂಟ್ ನೆರವಿನಿಂದ ಕೆಳಕ್ಕೆ ಧುಮುಕಿದರೂ ರುಸುಕಿಯ ವಿಟ್ಯಾಜಿ ಕಮಾಂಡರ್ ಕರ್ನಲ್ ಇಗೋರ್ ಥಾಚೆಂಕೊ ಪ್ಯಾರಾಚ್ಯೂಟ್ ತೆರೆದುಕೊಳ್ಳದೇ ಸಾವಪ್ಪಿದರು ಎಂದು ವಾಯುಪಡೆ ವಕ್ತಾರ ಡಿರ್ಕ್ ತಿಳಿಸಿದ್ದಾರೆ. ಇನ್ನೊಬ್ಬ ಪೈಲಟ್ ಬೆನ್ನಿಗುಂಟಾದ ತೀವ್ರ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ್ದಾರೆ.