25ರ ಪ್ರಾಯದ ಈಜಿಪ್ಟಿನ ಪರಿಚಾರಿಕೆಯೊಬ್ಬಳು ಕೇವಲ 45 ದಿನಗಳಲ್ಲಿ 7 ಬಾರಿ ಮದುವೆಗಳನ್ನು ಮಾಡಿಕೊಂಡಿದ್ದು, ಬಹುಪತಿತ್ವದ ಆರೋಪದ ಮೇಲೆ ಹುರ್ಗಾಡಾ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪ್ರವಾಸಿ ವಿಹಾರಧಾಮದಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಯುವಕರ ಜತೆ ಅನಧಿಕೃತ ವೈವಾಹಿಕ ಒಪ್ಪಂದ ಮಾಡಿಕೊಂಡು ಸಂಬಂಧ ಹೊಂದುತ್ತಿದ್ದಳೆಂದು ತಿಳಿದುಬಂದಿದೆ.
ಈಜಿಪ್ಟಿನಲ್ಲಿ ವಿವಾಹೇತರ ಸಂಬಂಧವನ್ನು ನಿಷೇಧಿಸಲಾಗಿರುವ ಹಿನ್ನೆಲೆಯಲ್ಲಿ ಆಕೆ ವೈವಾಹಿಕ ಒಪ್ಪಂದ ಮಾಡಿಕೊಳ್ಳುತ್ತಿದ್ದಳು. ಪರಿಚಾರಿಕೆಯು ಯುವ ಗುತ್ತಿಗೆದಾರನೊಬ್ಬನಿಗೆ ಕೆಫೆಯಲ್ಲಿ ಆಕರ್ಷಿತನಾಗಿ ಮದುವೆ ಪ್ರಸ್ತಾಪ ಮಾಡಿದಳು. ಮದುವೆಯಾಗಿ ಕೆಲವೇ ದಿನಗಳಲ್ಲಿ ಯುವಕ ರಾಮದನ್ ತನ್ನ ಮದುವೆಗಿಂತ ಮುಂಚೆ ತನ್ನ ಪತ್ನಿ ಮಾಡಿಕೊಂಡ ಒಂದು ಅನಧಿಕೃತ ವಿವಾಹ ಒಪ್ಪಂದವನ್ನು ಪತ್ತೆಹಚ್ಚಿದ.
ಈ ಕುರಿತು ಅವನು ಪತ್ನಿಯನ್ನು ಪ್ರಶ್ನಿಸಿದಾಗ, ತಾನು ಪುರುಷ ವ್ಯಸನಿಯಾಗಿದ್ದು, 45 ದಿನಗಳಲ್ಲಿ 7 ಮದುವೆಯಾಗಿರುವುದಾಗಿ ಹೇಳಿ ಅವನನ್ನು ಆಶ್ಚರ್ಯಚಕಿತಳಾಗಿಸಿದಳು. ಕೇವಲ 10 ಗಂಟೆಗಳ ಅವಧಿಯಲ್ಲಿ 2 ವಿವಾಹಗಳನ್ನು ಮಾಡಿಕೊಂಡಿದ್ದಾಗಿ ಹೇಳಿದ ಅವಳು ತಾನು ಗರ್ಭಿಣಿಯೆಂದು ಕೂಡ ಬಹಿರಂಗ ಮಾಡಿದಳು. ತನ್ನ ಪತ್ನಿಯ ವಿರುದ್ಧ ಪತಿ ಪೊಲೀಸರಿಗೆ ದೂರು ನೀಡಿದ ಬಳಿಕ, ವಂಚನೆ, ಬಹುಪತಿತ್ವ ಮುಂತಾದ ಆರೋಪಗಳ ಮೇಲೆ ಪೊಲೀಸರು ಅವಳನ್ನು ಬಂಧಿಸಿದ್ದಾರೆ.