ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಮೀದ್ ಕರ್ಜೈ ಅರಮನೆ ಮೇಲೆ ರಾಕೆಟ್ ದಾಳಿ (Rocket | Afghanistan | Election | Taliban)
 
ಆಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ ಇನ್ನೂ ಎರಡು ದಿನಗಳು ಬಾಕಿ ಉಳಿದಿರುವಂತೆಯೇ ಅಧ್ಯಕ್ಷ ಹಮೀದ್ ಕರ್ಜೈ ಅವರ ಅರಮನೆ ಮೇಲೆ ರಾಕೆಟ್ ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ರಾಕೆಟ್ ಅರಮನೆಯ ಆವರಣಕ್ಕೆ ಬಡಿದು ಹಾನಿವುಂಟುಮಾಡಿದೆಯೆಂದು ಹೇಳಲಾಗಿದೆ.

ಉಗ್ರಗಾಮಿಗಳು ಹಾರಿಸಿದ ಇನ್ನೊಂದು ರಾಕೆಟ್ ಪೊಲೀಸ್ ಕೇಂದ್ರಕಚೇರಿಗೆ ಬಡಿದಿದೆ. ಅಧ್ಯಕ್ಷೀಯ ಚುನಾವಣೆಗೆ ಅಡ್ಡಿಪಡಿಸುವುದಾಗಿ ಉಗ್ರಗಾಮಿಗಳು ಶಪಥ ತೊಟ್ಟಿದ್ದು, ಈ ತಿಂಗಳಲ್ಲೇ ಉಗ್ರಗಾಮಿಗಳು ಎರಡು ಬಾರಿ ರಾಜಧಾನಿ ಮೇಲೆ ದಾಳಿ ಮಾಡಿದ್ದರು. ಇತ್ತೀಚಿನ ದಾಳಿಯಲ್ಲಿ ನಾಲ್ಕು ರಾಕೆಟ್‌ಗಳನ್ನು ಹಾರಿಸಲಾಗಿದೆಯೆಂದು ತಾಲಿಬಾನ್ ವಕ್ತಾರ ಹೇಳಿದ್ದಾನೆಂದು ರಾಯ್ಟರ್ಸ್ ವರದಿ ಮಾಡಿದೆ.

ಸುಮಾರು 20 ವರ್ಷಗಳಿಂದ ಯುದ್ಧದಿಂದ ಜರ್ಜರಿತವಾದ ಆಫ್ಘಾನಿಸ್ತಾನದಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗೆ ಅಡ್ಡಿಪಡಿಸಲು ಉಗ್ರಗಾಮಿಗಳು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಏತನ್ಮಧ್ಯೆ,ಆಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆಗೆ ಮುನ್ನ, ವಂಚನೆ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿರುವ ಬಗ್ಗೆ ಬಿಬಿಸಿಗೆ ಸಾಕ್ಷ್ಯಾಧಾರಗಳು ಸಿಕ್ಕಿವೆಯೆಂದು ತಿಳಿದುಬಂದಿದೆ. ಸಾವಿರಾರು ಮತಚೀಟಿಗಳನ್ನು ಮಾರಾಟಕ್ಕಿಟ್ಟಿದ್ದು, ಮತಗಳನ್ನು ಖರೀದಿಸಲು ಸಾವಿರಾರು ಡಾಲರ್‌ಗಳನ್ನು ಲಂಚವಾಗಿ ನೀಡಲಾಗಿದೆಯೆಂದು ವರದಿಯಾಗಿದೆ.

ಗುರುವಾರ ನಡೆಯಲಿರುವ ಚುನಾವಣೆಗೆ ಪ್ರಚಾರದ ಭರಾಟೆ ಮುಗಿಯುತ್ತಿದ್ದಂತೆ ಈ ವಂಚನೆಗಳನ್ನು ಪತ್ತೆಹಚ್ಚಲಾಗಿದೆ. ಬಿಬಿಸಿಗೆ ಕೆಲಸ ಮಾಡುವ ಆಫ್ಘನ್ ಪೌರರೊಬ್ಬರು ಕಾಬೂಲ್‌ನಲ್ಲಿ ಮತಚೀಟಿಗಳನ್ನು ಮಾರುತ್ತಿರುವ ವರದಿಗಳ ಬಗ್ಗೆ ರಹಸ್ಯವಾಗಿ ತನಿಖೆ ನಡೆಸಿದಾಗ ಮೇಲಿನ ವಿಷಯಗಳು ಬಹಿರಂಗವಾಗಿದೆ. ಅವರಿಗೆ 1000 ಮತಚೀಟಿಗಳನ್ನು ತಲಾ 6 ಡಾಲರ್ ಮೌಲ್ಯಕ್ಕೆ ಮಾರುವ ಪ್ರಸ್ತಾಪ ಮಂಡಿಸಲಾಯಿತೆಂದೂ, ಇತರೆ ಮಾರಾಟಗಾರರು ಇದೇ ರೀತಿ ಪ್ರಸ್ತಾಪ ಮಾಡಿದರೆಂದೂ ಹೇಳಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ