ಪಾಕಿಸ್ತಾನ ತಾಲಿಬಾನ್ ಉನ್ನತ ವಕ್ತಾರನ್ನು ಆಫ್ಘನ್ ಗಡಿಯ ಬಳಿ ಭದ್ರತಾಪಡೆಗಳು ಸೆರೆಹಿಡಿದಿರುವುದಾಗಿ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ. ಮೌಲ್ವಿ ಒಮರ್ ತನ್ನ ಇಬ್ಬರು ಸಹಚರರ ಜತೆ ಕಾರಿನಲ್ಲಿ ತೆರಳುತ್ತಿದ್ದಾಗ ಮೊಹಮಂಡ್ ಬುಡಕಟ್ಟು ಪ್ರದೇಶದ ಗ್ರಾಮವೊಂದರಲ್ಲಿ ಅವನನ್ನು ಸೆರೆಹಿಡಿಯಲಾಗಿದೆಯೆಂದು ಮೂವರು ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ಹಿರಿಯರು ಒಮರ್‌ನನ್ನು ಪತ್ತೆಹಚ್ಚಲು ನೆರವಾದರೆಂದು ಅವರು ಹೇಳಿದ್ದಾರೆ. ತೆಹ್ರಿಕ್ ಎ ತಾಲಿಬಾನ್ ವಕ್ತಾರನಾಗಿ ಇತ್ತೀಚಿನ ದಿನಗಳಲ್ಲಿ ಒಮರ್ ಪ್ರಾಮುಖ್ಯತೆ ಗಳಿಸಿದ್ದನು.
ಪಾಕಿಸ್ತಾನದೊಳಕ್ಕೆ ಹತ್ತಾರು ಭಯೋತ್ಪಾದನೆ ಕೃತ್ಯಗಳ ಬಗ್ಗೆ ಪತ್ರಕರ್ತರಿಗೆ ಕರೆ ಮಾಡಿ ತಮ್ಮ ಸಂಘಟನೆಯೇ ಹೊಣೆಯೆಂದು ಹೇಳುತ್ತಿದ್ದನು. ಒಮರ್ ಬಂಧನವನ್ನು ಮಂಗಳವಾರ ತಡವಾಗಿ ಸಾರ್ವಜನಿಕವಾಗಿ ಪ್ರಕಟಿಸುವ ಸಂಭವವಿದೆಯೆಂದು ಹೆಸರುಹೇಳಲು ಬಯಸದ ಅಧಿಕಾರಿಗಳು ತಿಳಿಸಿದ್ದಾರೆ.