ಆಫ್ಘನ್‌ನಲ್ಲಿ ಭಾರತದ ಅಭಿವೃದ್ಧಿ ಕಾರ್ಯ: ಪಾಕ್‌ಗೆ ಕಿರಿಕಿರಿ
ವಾಷಿಂಗ್ಟನ್, ಬುಧವಾರ, 19 ಆಗಸ್ಟ್ 2009( 11:48 IST )
ಯುದ್ಧಪೀಡಿತ ಆಫ್ಘಾನಿಸ್ತಾನದ ಪುನರ್ನಿರ್ಮಾಣಕ್ಕೆ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ನೆರೆಯ ಪಾಕಿಸ್ತಾನದಲ್ಲಿ ಆತಂಕದ ಅಲೆಗಳನ್ನು ಕಲಕಿದೆಯೆಂದು ಮಾಧ್ಯಮದ ವರದಿ ತಿಳಿಸಿದೆ. ತಾಲಿಬಾನ್ ಬಳಿಕದ ಆಫ್ಘನ್ ಆಳ್ವಿಕೆಗೆ ಭಾರತ 1.2 ಮಿಲಿಯನ್ ಅಮೆರಿಕ ಡಾಲರ್ ಭರವಸೆ ಕೊಟ್ಟಿದೆ.
ಇದರಿಂದಾಗಿ ಭಾರತ ಅಮೆರಿಕ, ಬ್ರಿಟನ್, ಜಪಾನ್ ಮತ್ತು ಕೆನಡಾ ಬಳಿಕ ಐದನೇ ದೊಡ್ಡ ದಾನಿ ರಾಷ್ಟ್ರವೆನಿಸಿದೆ. 'ಆದರೆ ಪಾಕಿಸ್ತಾನ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಭಾರತದ ಜತೆ ಆಫ್ಘಾನಿಸ್ತಾನದ ಸ್ನೇಹ, ಪಾಕಿಸ್ತಾನಕ್ಕೆ ಕಿರಿಕಿರಿ' ಎಂದು ವಾಲ್ ಸ್ಟ್ರೀಟ್ ಜರ್ನಲ್ ಲೇಖನದಲ್ಲಿ ತಿಳಿಸಿದೆ. ತಾಲಿಬಾನ್ ಆಳ್ವಿಕೆಯಲ್ಲಿ ಆಫ್ಘಾನಿಸ್ತಾನವನ್ನು ದೂರವಿಟ್ಟಿದ್ದ ಭಾರತ ಪ್ರಜಾಪ್ರಭುತ್ವ ಆಪ್ಘನ್ ಸರ್ಕಾರಕ್ಕೆ ಹೊಸ ದಾನಿ ಮತ್ತು ಸ್ನೇಹಿತನಾಗಿರುವುದು ಅದರ ಕಡು ವೈರಿ ಪಾಕಿಸ್ತಾನಕ್ಕೆ ಕಿರಿಕಿರಿವುಂಟುಮಾಡಿದೆ.
ಬಾವಿಗಳು, ಟಾಯ್ಲೆಟ್‌ಗಳು ವಿದ್ಯುತ್ ಘಟಕಗಳು ಮತ್ತು ಉಪಗ್ರಹ ಟ್ರಾನ್ಸಿಮಟರ್‌ಗಳವರೆಗೆ ಭಾರತ ಆಫ್ಘಾನಿಸ್ತಾನದಲ್ಲಿ ಎಲ್ಲ ಯೋಜನೆಗಳನ್ನು ಹಮ್ಮಿಕೊಂಡಿದೆಯೆಂದು ಡೇಲಿ ತಿಳಿಸಿದೆ.