ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಗ್ದಾದ್ ಸ್ಫೋಟಗಳಿಗೆ 50 ಜನರ ಸಾವು (Car bombs | Baghdad | Mortars | Attacks)
 
ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಬುಧವಾರ ನಡೆದ ಸರಣಿ ದಾಳಿಗಳಲ್ಲಿ ಕನಿಷ್ಠ 50 ಜನರು ಅಸುನೀಗಿದ್ದು, 300 ಜನರು ಗಾಯಗೊಂಡಿದ್ದಾರೆ. ಕಾರ್ ಬಾಂಬ್‌ಗಳು ಮತ್ತು ತೋಪುಗಳನ್ನು ದಾಳಿಗೆ ಬಳಸಲಾಗಿದೆ. ವಿದೇಶಾಂಗ ಮತ್ತು ವಿತ್ತ ಸಚಿವಾಲಯಗಳ ಬಳಿ ಎರಡು ಭಾರೀ ಕಾರ್ ಬಾಂಬ್‌ಗಳು ಸ್ಫೋಟಿಸಿದವು. ತೀವ್ರ ಭದ್ರತೆಯ ಹಸಿರು ವಲಯದಲ್ಲಿ ತೋಪುಗಳೆಂದು ಶಂಕಿಸಲಾದ ಮ‌ೂರು ಸ್ಫೋಟಗಳು ಸಂಭವಿಸಿವೆ.

ಇರಾಕಿ ಪಡೆಗಳು ನಗರದ ಭದ್ರತೆಯ ಜವಾಬ್ದಾರಿಯನ್ನು ತೆಗೆದುಕೊಂಡ ಬಳಿಕ ಬಾಗ್ದಾದ್ ಅನೇಕ ದಾಳಿಗಳನ್ನು ಕಂಡಿದೆ. ಅನೇಕ ದಾಳಿಗಳನ್ನು ಶಿಯಾ ನೆರೆಯ ಪ್ರದೇಶದ ಮೇಲೆ ಗುರಿಯಿರಿಸಲಾಗಿದೆ. ಸಚಿವಾಲಯದ ಸಂಕೀರ್ಣದ ಭಾಗವಾದ 10 ಮಹಡಿಗಳ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಮೀಪದ ಕಟ್ಟಡಗಳು ಮತ್ತು ಹೊರಗೆ ನಿಲ್ಲಿಸಿದ್ದ ಹತ್ತಾರು ಕಾರುಗಳು ಹಾನಿಗೀಡಾಗಿವೆ.

ಇದೇ ಸಮಯದಲ್ಲಿ ಹಸಿರುವಲಯದೊಳಕ್ಕೆ ತೋಪುಗಳನ್ನು ಕೂಡ ಸಿಡಿಸಲಾಗಿದೆ. ತೋಪುಗಳಿಂದ ಎಷ್ಟು ಹಾನಿಯಾಗಿದೆಯೆಂದು ತಕ್ಷಣವೇ ಗೊತ್ತಾಗಿಲ್ಲ. ಇನ್ನೊಂದು ಕಾರ್ ಬಾಂಬನ್ನು ಜಂಟಿ ಇರಾಕಿ ಪೊಲೀಸ್‌ ಮತ್ತು ಸೇನಾ ಗಸ್ತಿಗೆ ಗುರಿಯಿರಿಸಿದ್ದು, ಒಬ್ಬ ಇರಾಕಿಸೈನಿಕ ಮತ್ತು ಇಬ್ಬರು ನಾಗರಿಕರು ಹತರಾಗಿದ್ದಾರೆ. ಪಶ್ಚಿಮ ಬಾಗ್ದಾದ್‌ನಲ್ಲಿ ಕಾರ್ ಬಾಂಬೊಂದು ಬಾಯಾಯಿ ವಾಣಿಜ್ಯ ಪ್ರದೇಶದಲ್ಲಿ ಸ್ಫೋಟಿಸಿದ್ದು, ಕನಿಷ್ಠ ಇಬ್ಬರು ಸತ್ತಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆಂದು ತಿಳಿದಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ