ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್ ಹೊಟೆಲ್‌ನಲ್ಲಿ ಬಂಗಾಳ ಟೆಕಿಯ ಶವ ಪತ್ತೆ (Bengal | London | Software | Suri)
 
ಸೂರಿಯ ಸಾಫ್ಟ್‌ವೇರ್ ಎಂಜಿನಿಯರ್ ಕಾಜಿ ವಾಸಿಂ ಅಖ್ತರ್(25)ನಿಗೂಢ ರೀತಿಯಲ್ಲಿ ಲಂಡನ್ ಹೊಟೆಲ್ ಕೋಣೆಯಲ್ಲಿ ಸೋಮವಾರ ರಾತ್ರಿ ಸತ್ತಿದ್ದಾರೆ. ಹೈದರಾಬಾದ್‌ನ ಸಾಫ್ಟ್‌ವೇರ್ ಸಂಸ್ಥೆಯು ಅವರನ್ನು ಲಂಡನ್‌ಗೆ ಕೆಲಸದ ಮೇಲೆ ನಿಯೋಜಿಸಿತ್ತು.

ಲಂಡನ್ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಸಾವಿಗೆ ಕಾರಣವನ್ನು ತನಿಖೆ ಮಾಡಲು ಮ‌ೂರು ದಿನಗಳನ್ನು ತೆಗೆದುಕೊಂಡು ಬಳಿಕ ದೇಹವನ್ನು ಭಾರತಕ್ಕೆ ಕಳಿಸಲಿದ್ದಾರೆ. ಕೊಲ್ಕತ್ತಾಗೆ 200 ಕಿಮೀ ದೂರದ ಸೂರಿಯಲ್ಲಿ ಜನಿಸಿದ ಅಖ್ತರ್, ಎಂಎನ್‌ಸಿ ವೆರಿಜೋನಾ ಡಾಟಾ ಸೇವೆಯಲ್ಲಿ ಒಂದೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ಲಂಡನ್ ಮತ್ತು ಪ್ಯಾರಿಸ್‌ಗೆ ತರಬೇತಿಗೆ ತೆರಳಲು ನಿಯೋಜಿಸಲಾಗಿತ್ತು.

ಲಂಡನ್‌ಗೆ ತಲುಪಿದ ಬಳಿಕ ತಮಗೆ ಅಥವಾ ಅವನ ತಾಯಿಗೆ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದ, ಶನಿವಾರ ಅವನು ಕೊನೆಯ ಬಾರಿ ಕರೆಮಾಡಿದ್ದ. ಭಾನುವಾರ ಅಖ್ತರ್ ತಂದೆ ಮೊಕ್ತಿಬ್‌ಗೆ ಪೊಲೀಸ್ ಅಧಿಕಾರಿ ಕರೆ ಮಾಡಿ ನಿಮ್ಮ ಪುತ್ರ ತೀರಿಕೊಂಡನೆಂದು ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ