ಚೆರಿಯೊಮುಷ್ಕಿ, ಗುರುವಾರ, 20 ಆಗಸ್ಟ್ 2009( 11:27 IST )
ಸೈಬೀರಿಯದ ಜಲವಿದ್ಯುತ್ ಇಂಧನ ಕೇಂದ್ರದಲ್ಲಿ ಪ್ರವಾಹ ಆವರಿಸಿದ 3 ದಿನಗಳ ಬಳಿಕ ಗುರುವಾರ ಇನ್ನೂ 60 ಕಾರ್ಮಿಕರು ನಾಪತ್ತೆಯಾಗಿದ್ದು, ಸತ್ತವರ ಸಂಖ್ಯೆ 15ಕ್ಕೇರಿದೆ. ಈಜುಗಾರರ ತಂಡಗಳು ಮತ್ತು ರೊಬೊಟ್‍ಗಳನ್ನು ಕೂಡ ಸಯಾನೊ-ಶುಶೆನ್‌ಸ್ಕ್ಯ ಘಟಕದ ಪ್ರವಾಹಪೀಡಿತ ಹೆಪ್ಪುಗಟ್ಟಿದ ನೀರಿನಲ್ಲಿ ಬಿಡಲಾಗಿದ್ದು, ಸಜೀವವಾಗಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ಪತ್ತೆಹಚ್ಚಲು ಕೊನೆಯ ಪ್ರಯತ್ನ ನಡೆಸಲಾಗಿದೆ.
ಗುರುವಾರ ಆರಂಭದಲ್ಲಿ ದೇಹವೊಂದು ಪತ್ತೆಯಾದ ಬಳಿಕ ಅಧಿಕೃತ ಸತ್ತವರ ಸಂಖ್ಯೆಯು 15ಕ್ಕೆ ಮುಟ್ಟಿದೆಯೆಂದು ತುರ್ತುಸ್ಥಿತಿ ಸಚಿವಾಲಯ ತಿಳಿಸಿದೆ. 15 ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಇನ್ನೂ 60 ಮಂದಿ ನಾಪತ್ತೆಯಾಗಿದ್ದಾರೆ.
ರಷ್ಯಾದ ದೊಡ್ಡ ಜಲವಿದ್ಯುತ್ ಘಟಕದ ಮುಖ್ಯ ಟರ್ಬೈನ್ ಕೋಣೆಯಲ್ಲಿ ಸುಮಾರು 100 ಕಾರ್ಮಿಕರು ಕಲೆತಿದ್ದಾಗ ಭಾರೀ ಪ್ರವಾಹದ ನೀರು ನುಗ್ಗಿತ್ತು.ಸೋವಿಯತ್ ಒಕ್ಕೂಟದ ಅಡಿಯಲ್ಲಿ ನಿರ್ಮಿಸಲಾದ ಜಲವಿದ್ಯುತ್ ಕೇಂದ್ರ ರಷ್ಯಾದಲ್ಲೇ ಬೃಹತ್ತಾಗಿದ್ದು, ಪ್ರತಿಗಂಟೆಗೆ 6.4 ದಶಲಕ್ಷ ಕಿಲೊವಾಟ್ ಸಾಮರ್ಥ್ಯ ಹೊಂದಿದೆ.