ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ ಸೇನಾಪಡೆಯಿಂದ ತರಬೇತಿಗೆ ಪಾಕ್ ಬಯಕೆ (Tamil Eelam | Pakistan | Islamabad | Military)
 
ಒಂದೊಮ್ಮೆ ಅದೃಶ್ಯದ ಪಡೆಯೆಂದೇ ಹೆಸರಾಗಿದ್ದ ಉಗ್ರಗಾಮಿ ಸಂಘಟನೆ ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಸೇನೆ ಜಯಗಳಿಸಿರುವುದು ವಿದೇಶಗಳ ಕಣ್ಣು ಕುಕ್ಕಿದೆ.ತನ್ನ ಮಿಲಿಟರಿ ಸಿಬ್ಬಂದಿಗೆ ತರಬೇತಿ ನೀಡುವಂತೆ ದ್ವೀಪ ರಾಷ್ಟ್ರಕ್ಕೆ ಪಾಕಿಸ್ತಾನ ಕೋರಿಕೊಂಡಿದೆ. ಶ್ರೀಲಂಕಾ ಮಿಲಿಟರಿಯು ತಮ್ಮ ಸೇನಾಸಿಬ್ಬಂದಿಗೆ ಉಗ್ರಗಾಮಿಗಳ ನಿಗ್ರಹ ಕಾರ್ಯಾಚರಣೆ ಕುರಿತು ತರಬೇತಿ ನೀಡಲು ಪಾಕಿಸ್ತಾನ ಬಯಸಿದೆಯೆಂದು ಶ್ರೀಲಂಕಾ ಸೇನೆಯ ಲೆ. ಜನರಲ್ ಜಗತ್ ಜಯಸೂರ್ಯ ಹೇಳಿಕೆ ಉಲ್ಲೇಖಿಸಿ ಡಾನ್ ಸುದ್ದಿಪತ್ರಿಕೆ ವರದಿಮಾಡಿದೆ.

ಮ‌ೂರು ವರ್ಷಗಳ ತೀವ್ರ ಕದನದಲ್ಲಿ ಎಲ್‌ಟಿಟಿಇಯನ್ನು ನಿರ್ನಾಮ ಮಾಡಿದ ಶ್ರೀಲಂಕಾ ಸೇನಾ ಪಡೆ ಅಳವಡಿಸಿದ ಕಾರ್ಯತಂತ್ರ ಮತ್ತು ವ್ಯೂಹಗಳನ್ನು ಕುರಿತು ಕೆಲವು ರಾಷ್ಟ್ರಗಳು ಕೂಡ ಮಾಹಿತಿ ಕೋರಿವೆ. ಉಳಿದ ರಾಷ್ಟ್ರಗಳು ಶ್ರೀಲಂಕಾಗೆ ಶಸ್ತ್ರಾಸ್ತ್ರ ಮಾರಾಟಕ್ಕೆ ನಿರ್ಬಂಧ ಹಾಕಿದಾಗ ಎಲ್‌ಟಿಟಿಇ ವಿರುದ್ಧ ಹೋರಾಟಕ್ಕೆ ಶಸ್ತ್ರಾಸ್ತ್ರವನ್ನು ಪೂರೈಸುವಲ್ಲಿ ಪಾಕಿಸ್ತಾನ ಶ್ರೀಲಂಕಾಗೆ ನೆರವು ನೀಡಿದೆ.

ಎಲ್‌ಟಿಟಿಇ ನೌಕಾಸೇನೆ ನಿಭಾಯಿಸಲು ಶ್ರೀಲಂಕಾ ನೌಕಾಪಡೆ ಬಳಸಿದ ತಂತ್ರಗಳು ಬೇರೆ ನೌಕಾಪಡೆಗಳಿಗೂ ಅನುಕೂಲವಾಗಬಹುದು ಎಂದು ಅಂತಾರಾಷ್ಟ್ರೀಯ ನೌಕಾದಳದ ವಿಚಾರಸಂಕಿರಣದಲ್ಲಿ ಮಾಜಿ ನೌಕಾಪಡೆ ಮುಖ್ಯಸ್ಥರಾಗಿದ್ದ ಪ್ರಸಕ್ತ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ವಸಂತಾ ಕರಣ್ಣಗೊಡಾ ತಿಳಿಸಿದ್ದರು. ನೌಕಾದಳಗಳಿಗೆ ದೊಡ್ಡ ಯುದ್ಧನೌಕೆಗಳು ಮತ್ತು ನಾಶಕಗಳು ಬೇಕಾಗಿಲ್ಲ. ಬಂಡುಕೋರ ಕೃತ್ಯಗಳು,ಕಡಲ್ಗಳ್ಳತನ ಮತ್ತು ಕಳ್ಳಸಾಗಾಣಿಕೆಗೆ ಪಾತಕಿಗಳು ಬಳಸುವಂಥ ಸಣ್ಣ ಮತ್ತು ವೇಗವಾಗಿ ಚಲಿಸುವ ದೋಣಿಗಳು ಅಗತ್ಯವಾಗಿದೆಯೆಂದು ಹೇಳಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ