ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪರ-ವಿರೋಧ: ನೆನೆಗುದಿಗೆ ಬಿದ್ದ ಮುಷರಫ್ ವಿಚಾರಣೆ (Musharraf | Gillani | Nisar | Trial)
 
PTI
PTI
ಪಾಕಿಸ್ತಾನ ರಾಜಕಾರಣಿಗಳಲ್ಲಿ ಒಂದು ವರ್ಗವು ಮಾಜಿ ಮಿಲಿಟರಿ ಸರ್ವಾಧಿಕಾರಿ ಮುಷರಫ್ ನೆನಪನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದು, ಸಂವಿಧಾನ ಉಲ್ಲಂಘಿಸಿದ ಮುಷರಫ್ ಅವರನ್ನು ಸರ್ಕಾರ ಜವಾಬ್ದಾರಿಯಾಗಿಸಬೇಕೆಂದು ಒತ್ತಾಯಿಸಿದೆ. ಸಂಸತ್ತಿನ ಅಧಿವೇಶನದಲ್ಲಿ ಪಿಎಂಎಲ್-ಎನ್ ಮುಖಂಡ ಚೌಧರಿ ನಿಸಾರ್ ಅಲಿ ಖಾನ್, ಮುಷರಫ್ ಅವರ ವಿರುದ್ಧ ವಿಚಾರಣೆಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕೆಂದು ಪಟ್ಟು ಹಿಡಿದಿದ್ದು, ಸದನದಲ್ಲಿ ಗೊಂದಲ ಮ‌ೂಡಿಸಿತು.

ಆದರೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಮ್ಮತ ಮ‌ೂಡಿಸಲು ಸಾಧ್ಯವಾದರೆ ಮಾತ್ರ ಮುಷರಫ್ ಅವರನ್ನು ವಿಚಾರಣೆಗೆ ಒಳಪಡಿಸುವ ಪ್ರಶ್ನೆ ಮ‌ೂಡುತ್ತದೆಂದು ಪ್ರಧಾನಿ ಗಿಲಾನಿ ಹೇಳಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭೇದಭಾವ ಇರುವ ಹಿನ್ನೆಲೆಯಲ್ಲಿ ಅದೊಂದು ಅಪ್ರಸ್ತುತ ವಿಷಯವೆಂದು ಪ್ರದಾನಿ ಹೇಳಿದರು.

ಮುಷರಫ್ ವಿಚಾರಣೆ ಕುರಿತಂತೆ ರಾಜಕೀಯ ವಿಶ್ಲೇಷಕರಲ್ಲಿ ಎರಡು ಅಭಿಪ್ರಾಯಗಳಿವೆ. ಅವರ ವಿಚಾರಣೆಯಿಂದ ರಾಷ್ಟ್ರವನ್ನು ಮತ್ತಷ್ಟು ಅಸ್ಥಿರಗೊಳಿಸುತ್ತದೆಂದು ಒಂದು ವರ್ಗ ವಾದಿಸುತ್ತದೆ. ಸತ್ತುಹೋದ ವಿಷಯಕ್ಕೆ ಅಂಟಿಕೊಳ್ಳುವ ಬದಲಿಗೆ, ರಾಷ್ಟ್ರಕ್ಕೆ ಸ್ಥಿರತೆ ಅಗತ್ಯವಾಗಿದ್ದು, ಭವಿಷ್ಯದ ಮುನ್ನೋಟ ಹರಿಸಬೇಕೆಂದು ಅದು ಹೇಳಿದೆ. ಗಿಲಾನಿ ಸಹ ಮುಷರಫ್ ತನಿಖೆಯ ಜಟಿಲತೆ ಕುರಿತು ಬೊಟ್ಟು ಮಾಡಿ, ಯಾವುದು ಸಾಧ್ಯವೋ ಅದನ್ನು ಮಾತ್ರ ಮಾಡಬೇಕೆಂದು ಸಂಸತ್ತಿನಲ್ಲಿ ಹೇಳಿದ್ದರು.

ಆದರೆ ಸ್ಥಿರತೆಯ ವಾದವನ್ನು ವಿರೋಧಿಸಿದ ಮತ್ತೊಂದು ವರ್ಗ, ರಾಷ್ಟ್ರದಲ್ಲಿ ಮಿಲಿಟರಿಯ ಭವಿಷ್ಯದ ಕ್ರಾಂತಿಯನ್ನು ತಡೆಯಲು ಮುಷರಫ್ ವಿಚಾರಣೆ ಅವಶ್ಯಕವೆಂದು ವಾದ ಮಂಡಿಸಿದೆ. ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅಜ್ಞಾತವಾಸಕ್ಕೆ ಮುಷರಫ್ ಕಾರಣಕರ್ತರಾಗಿದ್ದು, ಮುಷರಫ್ ವಿಚಾರಣೆಗೆ ಒತ್ತಾಯಿಸುತ್ತಿರುವ ಮುಂಚೂಣಿ ಪಕ್ಷವಾಗಿದೆ.ಆದರೆ ಮುಷರಫ್ ಅವರನ್ನು ವಿಚಾರಣೆಯಿಂದ ರಕ್ಷಿಸುತ್ತಿರುವುದು ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲದ ನೆಲೆ, ಪಿಪಿಪಿ ನೇತೃತ್ವದ ಸರ್ಕಾರದ ಅಲಿಖಿತ ಭರವಸೆಗಳು ಮತ್ತು ಮಿಲಿಟರಿ ಹೈಕಮಾಂಡ್ ಎಂದು ಹೇಳಲಾಗಿದೆ.

ಮುಷರಫ್ ಅವರ ಸುರಕ್ಷಿತ ನಿರ್ಗಮನಕ್ಕೆ ಅಧ್ಯಕ್ಷ ಜರ್ದಾರಿ, ಪ್ರಧಾನಿ ಗಿಲಾನಿ, ಸೇನಾ ಮುಖ್ಯಸ್ಥ ಕಿಯಾನಿ, ಅಮೆರಿಕ ರಾಯಭಾರಿ ಅನ್ನೆ ಪ್ಯಾಟರ್‌ಸನ್ , ಪಾಕಿಸ್ತಾನಕ್ಕೆ ಬ್ರಿಟನ್ ವಿಶೇಷ ಪ್ರತಿನಿಧಿ ಸರ್ ಮಾರ್ಕ್ ಲಯಾಲ್ ಗ್ರಾಂಟ್ ಅಂತಿಮ ರೂಪು ನೀಡಿದ್ದಾರೆಂದು ಹೇಳಲಾಗುತ್ತಿದೆ. ಮುಷರಫ್ ಅವರ ವಿರುದ್ಧ ಯಾವುದೇ ಕೋರ್ಟ್ ಕ್ರಮವಿಲ್ಲದೇ ಸುರಕ್ಷಿತವಾಗಿ ನಿರ್ಗಮಿಸುವ ಉಡುಗೊರೆ ನೀಡುವುದು ಈ ಒಪ್ಪಂದದ ಗುರಿಯಾಗಿತ್ತೆಂದು ಹೇಳಲಾಗಿದೆ.

ಪಾಕಿಸ್ತಾನದ ಮಿಲಿಟರಿ 30 ವರ್ಷಗಳಿಗಿಂತ ಹೆಚ್ಚು ಕಾಲ ರಾಷ್ಟ್ರವನ್ನು ಆಳಿದ್ದು, ಮಾಜಿ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ವಿರೋಧಿಸಿದೆಯೆಂದು ತಿಳಿದುಬಂದಿದೆ. ಮುಷರಫ್ ವಿಚಾರಣೆ ಇನ್ನೂ ಕೆಲವು ತಾಂತ್ರಿಕ ಕಾರಣಗಳಿಂದ ಜಟಿಲವಾಗಿದೆ. ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರು ತುರ್ತುಪರಿಸ್ಥಿತಿ ಕಾಲದಲ್ಲಿ ಮುಷರಫ್ ಅವರಿಂದ ಪದಚ್ಯುತರಾದ್ದರಿಂದ ವಿವಾದಗಳಿಂದ ಮುಕ್ತರಾಗಿಲ್ಲ ಹಾಗೂ ನಿಷ್ಪಕ್ಷಪಾತ ತೀರ್ಪಿನ ಬಗ್ಗೆ ಶಂಕೆಯ‌ೂ ವ್ಯಕ್ತವಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ