ಆರೋಗ್ಯವಂತ ಜನರು ಹಂದಿಜ್ವರಕ್ಕೆ ತುತ್ತಾದರೆ ಅವರಿಗೆ ವೈರಲ್ ನಿರೋಧಕ ಟಾಮಿಫ್ಲೂ ನೀಡುವ ಅಗತ್ಯವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಶುಕ್ರವಾರ ಆರೋಗ್ಯ ಅಧಿಕಾರಿಗಳಿಗೆ ನೀಡಿದ ಹೊಸ ಸಲಹೆಯಲ್ಲಿ, ಹಂದಿ ಜ್ವರದ ಸಾಧಾರಣ ಅಥವಾ ಸೌಮ್ಯ ಸ್ಥಿತಿಯಲ್ಲಿ ಆರೋಗ್ಯವಂತ ಜನರಿಗೆ ಟಾಮಿಫ್ಲು ಮಾತ್ರೆಗಳನ್ನು ವೈದ್ಯರು ನೀಡುವ ಅಗತ್ಯವಿಲ್ಲವೆಂದು ವಿಶ್ವ ಆರೋಗ್ಯ ಏಜೆನ್ಸಿ ಆರೋಗ್ಯಾಧಿಕಾರಿಗಳಿಗೆ ನೀಡಿರುವ ಹೊಸ ಸಲಹೆಯಲ್ಲಿ ತಿಳಿಸಿದೆ.
ಆದರೆ ರಿಸ್ಕ್ ಗುಂಪಿನಲ್ಲಿರುವ ವೈರಸ್ ಸೋಂಕಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಔಷಧಿಯನ್ನು ಬಳಸಬೇಕೆಂದು ಹೇಳಿದೆ. 5 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು, ಗರ್ಭಿಣ ಮಹಿಲೆಯರು ಮತ್ತು 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಜನರು ಮತ್ತು ಹೃದಯ ಸಮಸ್ಯೆ, ಎಚ್‌ಐವಿ ಮತ್ತು ಮಧುಮೇಹ ಮುಂತಾದ ಆರೋಗ್ಯಸಮಸ್ಯೆಗಳನ್ನು ಎದುರಿಸುವ ಜನರು ರಿಸ್ಕ್ ಗ್ರೂಪ್‌ನಲ್ಲಿ ಸೇರಿದ್ದಾರೆಂದು ಡಬ್ಲ್ಯುಎಚ್‌ಒ ತಿಳಿಸಿದೆ.
ಆದರೆ ಹಂದಿ ಜ್ವರದಿಂದ ಶಂಕಿತರಾದ ಎಲ್ಲರಿಗೂ ಟಾಮಿಫ್ಲು ನೀಡುವ ಬ್ರಿಟನ್ ಮಾದರಿಯ ನೀತಿಗಳಿಗೆ ಡಬ್ಲ್ಯುಎಚ್‌ಒ ಹೊಸ ಸಲಹೆ ಸಂಪೂರ್ಣ ವೈರುದ್ಧ್ಯದಿಂದ ಕೂಡಿದೆ.