ನವೆಂಬರ್ 2008ರ ಮುಂಬೈ ಭಯೋತ್ಪಾದನೆ ದಾಳಿಗಳನ್ನು ಕುರಿತು ಭಾರತ ಶುಕ್ರವಾರ ಹಸ್ತಾಂತರಿಸಿದ ಹೊಸ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ ತಿಳಿಸಿದ್ದಾರೆ.
ಹೊಸ ಮಾಹಿತಿಯ ಬಗ್ಗೆ ನಮ್ಮ ಕಾನೂನು ತಜ್ಞರು ಪರಿಶೀಲಿಸಿ ಕಾನೂನುಬದ್ಧವಾಗಿ ಸಮರ್ಥನೀಯವೇ ಎಂದು ನೋಡಲಿರುವುದಾಗಿ ಖುರೇಷಿ ಹೇಳಿದ್ದಾಗಿ ಡೇಲಿ ಟೈಮ್ಸ್ ತಿಳಿಸಿದೆ. ಭಾರತವು ಶುಕ್ರವಾರ 26/11 ಭಯೋತ್ಪಾದನೆ ದಾಳಿಗಳ ಬಗ್ಗೆ ಭಾರತದ ಪಾಕಿಸ್ತಾನ ಹೈಕಮೀಷನರ್ ಶಾಹಿದ್ ಮಲಿಕ್ ಅವರಿಗೆ ಹೆಚ್ಚಿನ ಪುರಾವೆಯನ್ನು ಹಸ್ತಾಂತರಿಸಿತು.
ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಮ್ಮ ದಕ್ಷಿಣ ಬ್ಲಾಕ್ ಕಚೇರಿಯಲ್ಲಿ ಹೊಸ ಪುರಾವೆಯನ್ನು ಮಲಿಕ್ ಅವರಿಗೆ ಹಸ್ತಾಂತರಿಸಿದರು. ಭೇಟಿಯು ಸುಮಾರು ಅರ್ಧ ಗಂಟೆ ಕಾಲ ನಡೆಯಿತು. ಈ ಭೇಟಿಯ ಸಂದರ್ಭದಲ್ಲಿ, ಹೊಸ ಸಾಕ್ಷ್ಯಾಧಾರವನ್ನು ಭಾರತದ ಕಡೆಯಿಂದ ನೀಡಲಾಯಿತು. ಮುಂದಿನ ತಿಂಗಳು ಯುಎನ್‌ಜಿಎ ನೇಪಥ್ಯದಲ್ಲಿ ವಿದೇಶಾಂಗ ಸಚಿವರು ಮತ್ತು ವಿದೇಶಾಂಗ ಕಾರ್ಯದರ್ಶಿಗಳು ತಮ್ಮ ಪಾಕಿಸ್ತಾನದ ಸಹವರ್ತಿಗಳನ್ನು ಭೇಟಿ ಮಾಡುವರೆಂದು ನಿರೀಕ್ಷಿಸಲಾಗಿದೆ.
ಸಂಬಂಧಿಸಿದ ಅಧಿಕಾರಿಗಳಿಂದ ವಿವರಗಳು ಮತ್ತು ಸಾಕ್ಷ್ಯಾಧಾರದ ಸ್ವರೂಪ ತಕ್ಷಣವೇ ಬಹಿರಂಗವಾಗಿಲ್ಲ. ಮುಂಬೈ ದಾಳಿಗಳ ರೂವಾರಿ ಸಯೀದ್ ಬಿಡುಗಡೆಯಿಂದ ಭಾರತ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು,ಪಾಕಿಸ್ತಾನಕ್ಕೆ ನೀಡಿರುವ ಹೊಸ ದಾಖಲೆಗಳಲ್ಲಿ ಸಯೀದ್ ವಿರುದ್ಧ ಗಂಭೀರ ಸಾಕ್ಷ್ಯಾಧಾರವಿದೆಯೆಂದು ವರದಿಯಾಗಿದೆ.