ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಖಾತೆಗಳ ಬಗ್ಗೆ ವಿವರಗಳನ್ನು ನೀಡಬೇಕೆಂಬ ಭಾರತದ ಕೋರಿಕೆಯನ್ನು ಸ್ವಿಸ್ ಬ್ಯಾಂಕ್‌ಗಳು ನಿರಾಕರಿಸಿವೆ. ಕೆಲವು ಆಸಕ್ತಿದಾಯಕ ಸಂಗತಿಗಳಿಗಾಗಿ ಖಾತೆಗಳನ್ನು ಜಾಲಾಡುವುದಕ್ಕೆ ಸ್ವಿಸ್ ಕಾನೂನುಗಳು ಸಮ್ಮತಿಸುವುದಿಲ್ಲವೆಂದು ಅವು ತಿಳಿಸಿವೆ. ಭಾರತ ಸುಮ್ಮನೆ ಟೆಲಿಫೋನ್ ಪುಸ್ತಕವನ್ನು ಎಸೆದು ಪಟ್ಟಿಯಲ್ಲಿರುವ ಜನರ ಬ್ಯಾಂಕ್ ಖಾತೆಗಳು ಇವೆಯೇ ಎಂದು ಕೇಳಲು ಸಾಧ್ಯವಿಲ್ಲ ಎಂದು ಸ್ವಿಸ್ ಬ್ಯಾಂಕ್‌ಗಳು ಹೇಳಿವೆ.
ಭಾರತೀಯ ಖಾತೆಗಳ ಬಗ್ಗೆ ಸ್ವಿಸ್ ಬ್ಯಾಂಕ್‌ಗಳು ಒದಗಿಸುವ ಗೋಪ್ಯತೆಯ ರಕ್ಷಣೆಯು ಭಾರತದಲ್ಲಿ ಚುನಾವಣೆ ಪ್ರಚಾರದಲ್ಲಿ ಚರ್ಚೆಯ ದೊಡ್ಡ ವಿಷಯವಾಗಿತ್ತು. ಭಾರತೀಯರು ಅಲ್ಲಿ ಹೊಂದಿರುವ ಖಾತೆಗಳ ಬಗ್ಗೆ ವಿವರಗಳನ್ನು ನೀಡಬೇಕೆಂದು ಸ್ವಿಜರ್‌ಲ್ಯಾಂಡ್‌ನ್ನು ಸಂಪರ್ಕಿಸಿರುವುದಾಗಿ ಸರ್ಕಾರ ಇತ್ತೀಚಿಗೆ ತಿಳಿಸಿತ್ತು. ದೇಶದಲ್ಲಿರುವ ಮತ್ತು ದೇಶದ ಹೊರಗಿರುವ ಕಪ್ಪು ಹಣ ಹೊರತೆಗೆಯಲು ಸರ್ಕಾರ ಬದ್ಧವಾಗಿದೆಯೆಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕೂಡ ಇತ್ತೀಚೆಗೆ ಸಂಸತ್ತಿಗೆ ಮಾಹಿತಿ ನೀಡಿದ್ದರು. ಆದರೆ ಭಾರತೀಯರ ಖಾತೆಗಳ ವಿವರಗಳನ್ನು ನೀಡಲು ಸ್ವಿಸ್ ಬ್ಯಾಂಕ್‌ಗಳು ನಿರಾಕರಿಸಿದ್ದರಿಂದ ಸರ್ಕಾರ ಮುಜುಗರಕ್ಕೆ ಗುರಿಯಾಗಿದೆ.
ಕಳೆದ ವಾರ ಸ್ವಿಜರ್‌ಲ್ಯಾಂಡ್ ಜತೆ ಅಮೆರಿಕ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಅಡಿಯಲ್ಲಿ ಸ್ವಿಸ್ ಬ್ಯಾಂಕ್ ಯುಬಿಎಸ್ ಎಜಿ ಅಮೆರಿಕದ ಆಂತರಿಕ ಕಂದಾಯ ಸೇವೆಗೆ 4460 ಗೋಪ್ಯ ಖಾತೆಗಳ ವಿವರಗಳನ್ನು ನೀಡಿದೆ.ಸ್ವಿಸ್ ಕಾನೂನು ನಿಗದಿಪಡಿಸಿದ ಷರತ್ತುಗಳಿಗೆ ಮತ್ತು ಅಗತ್ಯಗಳನ್ನು ಪೂರೈಸದೇ ಗ್ರಾಹಕರ ಬ್ಯಾಂಕ್ ಖಾತೆ ವಿವರವನ್ನು ಬಲವಂತವಾಗಿ ಪಡೆಯುವ ಹಕ್ಕು ಸ್ವಿಸ್ ತೆರಿಗೆ ಅಧಿಕಾರಿಗಳಿಗೆ ಕೂಡ ಇಲ್ಲವೆಂದು ಎಸ್‌ಬಿಎ ತಿಳಿಸಿದೆ.
ಭಾರತದ ಅಪ್ರಾಮಾಣಿಕ ಉದ್ಯಮಿಗಳು, ಕಳಂಕಿತ ರಾಜಕಾರಣಿಗಳು ಮತ್ತು ಭ್ರಷ್ಟ ಐಎಎಸ್, ಐಆರ್‌ಎಸ್ ಮತ್ತು ಐಪಿಎಸ್ ಅಧಿಕಾರಿಗಳು ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮ ವೈಯಕ್ತಿಕ ಖಾತೆಗಳಲ್ಲಿ 1500 ಶತಕೋಟಿ ಡಾಲರ್ ಇಟ್ಟಿದ್ದಾರೆಂದು ತಿಳಿದುಬಂದಿದೆ. ಈ ಮೊತ್ತವು ದೇಶದ ವಿದೇಶಿ ಸಾಲಕ್ಕಿಂತ 13 ಪಟ್ಟು ಹೆಚ್ಚಾಗಿದೆ. ಈ ಹಣದಿಂದ ದೇಶದ 45 ಕೋಟಿ ಬಡಜನರಿಗೆ ಹಂಚಿದರೆ ತಲಾ ಒಂದು ಲಕ್ಷ ರೂ. ಸಿಗುತ್ತದೆಂದು ಹೇಳಲಾಗಿದೆ.
ಒಂದೊಮ್ಮೆ ಈ ಕಪ್ಪು ಹಣ ಹೊರತೆಗೆದರೆ 24 ಗಂಟೆಗಳಲ್ಲಿ ಇಡೀ ವಿದೇಶಿ ಸಾಲವನ್ನು ತೀರಿಸಬಹುದು. ಸಾಲ ತೀರಿಸಿದ ಮೇಲೂ ವಿದೇಶಿ ಸಾಲಕ್ಕಿಂತ 12 ಪಟ್ಟು ಹೆಚ್ಚುವರಿ ಮೊತ್ತ ಸಿಗುತ್ತದೆಂದು ಹೇಳಲಾಗಿದೆ. ವಿವಿಧ ರಾಷ್ಟ್ರಗಳ ಜನರ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಕೆಳಗಿನಂತಿದೆ: ಭಾರತ: 1456 ಶತಕೋಟಿ ಡಾಲರ್, ರಷ್ಯಾ: 470 ಶತಕೋಟಿ ಡಾಲರ್, ಬ್ರಿಟನ್: 390 ಶತಕೋಟಿ ಡಾಲರ್, ಉಕ್ರೇನ್: 100 ಶತಕೋಟಿ ಡಾಲರ್, ಚೀನಾ : 96 ಶತಕೋಟಿ ಡಾಲರ್.