ಸುದೀರ್ಘಕಾಲದ ಧೂಮಪಾನದಿಂದ ಸತ್ತ ವ್ಯಕ್ತಿಯ ಪುತ್ರಿಗೆ ಹಾನಿಯ ಪರಿಹಾರ ನೀಡುವಂತೆ ಸಿಗರೇಟ್ ತಯಾರಕ ಫಿಲಿಪ್ ಮೋರಿಸ್‌ಗೆ ನ್ಯಾಯಾಧೀಶರು ಆದೇಶ ನೀಡಿದ ವಿಚಿತ್ರ ಪ್ರಸಂಗ ವರದಿಯಾಗಿದೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಮೃತಪಟ್ಟ ಸುದೀರ್ಘ ಕಾಲದ ಧೂಮಪಾನಿಯೊಬ್ಬರಿಗೆ ಪರಿಹಾರ ಹಣದ ರೂಪದಲ್ಲಿ ಸಿಗರೇಟ್ ತಯಾರಕ ಅಮೆರಿಕದ ಫಿಲಿಪ್ ಮೋರಿಸ್ 13.8 ದಶಲಕ್ಷ ಡಾಲರ್ ಪಾವತಿ ಮಾಡಬೇಕೆಂದು ನ್ಯಾಯಾಧೀಶರೊಬ್ಬರು ತೀರ್ಪಿತ್ತರು.
ಲಾಸ್ ಏಂಜಲ್ಸ್ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಸೋಮವಾರ ತೀರ್ಪನ್ನು ನೀಡಿದರು. ಸಮಿತಿಯು ಈ ಪ್ರಕರಣದ ಕಕ್ಷಿದಾರರಾದ ಬುಲಕ್ ಪುತ್ರಿ ಜೋಡಿ ಬುಲಕ್ ಪರವಾಗಿ 9-3ರಲ್ಲಿ ಮತನೀಡಿತ್ತು. ಬೆಟ್ಟಿ ಬುಲಕ್ ಫೆಬ್ರವರಿ 2003ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಅವರ ಪುತ್ರಿ 2001ರಲ್ಲಿ ಫಿಲಿಪ್ ಮೋರಿಸ್ ವಿರುದ್ಧ ದಾವೆ ಹೂಡಿ, ಕಂಪೆನಿಯ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.
ಫಿಲಿಪ್ ಮೋರಿಸ್ ಬುಲಕ್ ಅವರಿಗೆ 28 ಶತಕೋಟಿ ಡಾಲರ್ ಹಣವನ್ನು ನೀಡಬೇಕೆಂದು 2002ರಲ್ಲಿ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದರು. ಆದರೆ ಬಳಿಕ ದಂಡದ ಹಣವನ್ನು 28 ಮಿಲಿಯನ್ ಡಾಲರ್‌ಗೆ ಕಡಿತಗೊಳಿಸಲಾಯಿತು. 2008ರಲ್ಲಿ 2ನೇ ಅಮೆರಿಕ ಜಿಲ್ಲಾ ಅಪೀಲು ನ್ಯಾಯಾಲಯ ನ್ಯಾಯಾಧೀಶರ ತೀರ್ಪನ್ನು ಬದಲುಮಾಡಿ ಹಾನಿ ಪರಿಹಾರ ವೆಚ್ಚದ ಪಾವತಿಯನ್ನು ಹೊಸ ವಿಚಾರಣೆಗೆ ಒಪ್ಪಿಸಿತು.
ಆದಾಗ್ಯೂ, ಮೂಲ ತೀರ್ಪುಗಾರರು ತಂಬಾಕು ಕಂಪೆನಿಗೆ 750,000 ಡಾಲರ್ ಹಾನಿ ತುಂಬುವ ರೂಪದಲ್ಲಿ ಮತ್ತು 100000 ಡಾಲರ್ ನೋವು ಮತ್ತು ಸಂಕಟಕ್ಕಾಗಿ ನೀಡಬೇಕೆಂದು ಬುಲಕ್‌ಗೆ ಆದೇಶಿಸಿದೆ.64 ವರ್ಷ ವಯಸ್ಸಾಗಿದ್ದ ಬೆಟ್ಟಿ ಬುಲಕ್ 17 ವರ್ಷ ವಯಸ್ಸಿನಲ್ಲೇ ಮಾರ್ಲ್‌ಬೊರೋಸ್ ಸಿಗರೇಟು ಎಳೆಯಲು ಆರಂಭಿಸಿ ಬಳಿಕ ಬೆನ್ಸನ್ & ಹೆಜೆಸ್ ಸಿಗರೇಟು ಸೇದಲು ಆರಂಭಿಸಿದ್ದರು. ಫಿಲಿಪ್ ಮೋರಿಸ್ ಪರ ವಕೀಲರು ಬೆಟ್ಟಿ ಬುಲಕ್ ಯಾವುದೇ ಸಂದರ್ಭದಲ್ಲಿ ಧೂಮಪಾನ ನಿಲ್ಲಿಸಬಹುದಿತ್ತು ಮತ್ತು ಸಿಗರೇಟಿನ ಹಾನಿಕರ ದುಷ್ಪರಿಣಾಮಗಳ ಬಗ್ಗೆ ಧೂಮಪಾನಿಗೆ ಅರಿವು ಇರಬೇಕಿತ್ತೆಂದು ಹೇಳಿದ್ದಾರೆ.