ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸುರಕ್ಷತೆ ಕ್ರಮ: ತಡರಾತ್ರಿಗೆ ಬ್ರೇಕ್, ಚಾಲಕನ ಪಕ್ಕವೇ ಸೀಟು (Australia | Indian | Attacks | Melbourne)
 
ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದಾಳಿಗಳು ನಡೆದ ಬಳಿಕ ಈಗ ವಿದ್ಯಾರ್ಥಿಗಳು ಮುಂಚಿನದಕ್ಕಿಂತ ಹೆಚ್ಚು ಜಾಗೃತರಾಗಿದ್ದು, ತಡರಾತ್ರಿಯಲ್ಲಿ ಪ್ರಯಾಣ ಮತ್ತು ಟ್ರಾಮ್ ಚಾಲಕರ ಹತ್ತಿರದಲ್ಲೇ ಕುಳಿತುಕೊಳ್ಳುವುದು ಮುಂತಾದ ಕ್ರಮಗಳನ್ನು ಭಾರತೀಯ ವಿದ್ಯಾರ್ಥಿಗಳು ಅನುಸರಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ನಾವು ನಮ್ಮ ನಿವಾಸದಿಂದ ಬೇಗನೇ ನಿರ್ಗಮಿಸಿ ಮುಂಚಿತವಾಗಿಯೇ ವಾಪಸು ಬರುತ್ತೇವೆ.

ಟ್ರಾಮ್‌ಗಳಲ್ಲಿ ಚಾಲಕನ ಪಕ್ಕದಲ್ಲೇ ಕುಳಿತುಕೊಳ್ಳುವುದು ಮುಂತಾದ ಆಯ್ಕೆ ಮಾಡಿಕೊಂಡಿದ್ದೇವೆ. ಮುಂಚಿನದಕ್ಕಿಂತ ನಾವು ಹೆಚ್ಚು ಎಚ್ಚರಿಕೆ ವಹಿಸಿದ್ದೇವೆ ಎಂದು ಆರ್‌ಎಂಐಟಿ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರಾಜೇಶ್ ರಾಮನಾಥನ್ ತಿಳಿಸಿದ್ದಾರೆ.

ಕೆಲಸಕ್ಕೆ ಹೋಗುವ ಮುಂಚೆ ಅಥವಾ ವಿವಿಗೆ ತೆರಳುವ ಮುಂಚೆ ತಾವು ಸಹವಾಸಿಗಳಿಗೆ ಮಾಹಿತಿ ನೀಡಿ ಹೋಗುವುದರಿಂದ ಸಕಾಲದಲ್ಲಿ ವಾಪಸು ಬರದಿದ್ದರೆ ಅವರು ವಿಚಾರಿಸಲು ಸಾಧ್ಯವಾಗುತ್ತದೆಂದು ಅವರು ಹೇಳಿದರು.

ಅದೇ ವಿವಿಯ ವಿದ್ಯಾರ್ಥಿ ದಿವ್ಯಾಶರ್ಮಾ, ತಾನು ಶಾಂತ ಮನಸ್ಥಿತಿಯಲ್ಲಿರಲು ಯೋಗ ಮಾಡುವುದಾಗಿ ಹೇಳಿದ್ದಾರೆ. ಯೋಗಾಸನದಿಂದ ಟ್ರಾಮ್‌ಗಳಲ್ಲಿ ಪ್ರಯಾಣ ಮಾಡುವಾಗ ಶಿಸ್ತಿನಿಂದ ಇರಲು ಸಾಧ್ಯವಾಗುತ್ತದೆಂದು ಹೇಳಿದ್ದಾರೆ. ವಿವಿಯಲ್ಲಿ ಯೋಗವನ್ನು ಕೂಡ ಬೋಧಿಸುವ ಶರ್ಮಾ, ಆಸ್ಟ್ರೇಲಿಯದ ಸಹವರ್ತಿಗಳನ್ನು ಮುಟ್ಟಲು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾರತೀಯ ವಿದ್ಯಾರ್ಥಿಗಳು ಗಮನಹರಿಸಿದ್ದಾರೆಂದು ತಿಳಿಸಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ