ತನ್ನ ವೈರಿದೇಶ ಉತ್ತರ ಕೊರಿಯ ಸ್ವತಃ ರಾಕೆಟ್ ಉಡಾವಣೆ ಮಾಡಿದ ಬಳಿಕ ಸುಮ್ಮನೆ ಕುಳಿತುಕೊಳ್ಳದ ದಕ್ಷಿಣ ಕೊರಿಯ ತಾನೇನು ಕಡಿಮೆ ಎನ್ನುವಂತೆ ಅದು ಕೂಡ ರಾಕೆಟ್ಟನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ. ಆದರೆ ರಾಕೆಟ್ ಒಯ್ಯುತ್ತಿದ್ದ ಉಪಗ್ರಹ ಉದ್ದೇಶಿತ ಕಕ್ಷೆಗೆ ಪ್ರವೇಶಿಸಲು ವಿಫಲವಾಗಿದೆಯೆಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದ್ದಾಗಿ ಬಾಹ್ಯಾಕಾಶ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಕೊರಿಯ ಮತ್ತು ರಷ್ಯಾದ ವಿಜ್ಞಾನಿಗಳು ಈ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದ್ದು, ಉಡಾವಣೆ ಯಶಸ್ಸಿಗೆ ಈ ಸಮಸ್ಯೆ ಹಾನಿವುಂಟು ಮಾಡುತ್ತದೆಯೇ ಎನ್ನುವುದು ತಕ್ಷಣಕ್ಕೆ ತಿಳಿದಿಲ್ಲ. ಎರಡು ಹಂತದ ನ್ಯಾರೊ ರಾಕೆಟ್ ಉಡಾವಣೆಯು ದೇಶದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗೆ ಚೇತರಿಕೆ ನೀಡುತ್ತದೆಂದು ಉತ್ತರ ಕೊರಿಯ ಎಚ್ಚರಿಸಿದೆ.
ಆದರೆ ಸೋಲ್ ಉಡಾವಣೆ ಬಗ್ಗೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಉತ್ತರ ಕೊರಿಯ ಎಚ್ಚರಿಸಿದೆ. ಕಳೆದ ಜುಲೈನಲ್ಲಿ ದಕ್ಷಿಣ ಕೊರಿಯ ರಾಕೆಟ್ ಉಡಾವಣೆಗೆ ಯೋಜಿಸಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ ಉಡಾವಣೆಯನ್ನು ಕೈಬಿಟ್ಟಿತು.ಕಳೆದ ಬುಧವಾರ ಸಹ ಉಡಾವಣೆ ಯೋಜನೆಯನ್ನು ಕಡೇ ನಿಮಿಷಗಳಲ್ಲಿ ಕೈಬಿಟ್ಟಿತ್ತು. ಆದರೆ ಮಂಗಳವಾರ ದೇಶದ ಒನರೊ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 5ಗಂಟೆಗೆ ರಾಕೆಟ್ ಉಡಾವಣೆ ಮಾಡಲಾಯಿತು.