ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಾಕ್ಸನ್ ಸಾವು: ವೈದ್ಯರ ವಿರುದ್ದ ಹತ್ಯೆ ಆರೋಪ? (Jackson | propofol | Documents | Murray)
 
ಮೈಕೇಲ್ ಜಾಕ್ಸನ್ ಸಾವಿನ ತನಿಖೆ ಕುರಿತ ಕೋರ್ಟ್ ದಾಖಲೆಗಳಲ್ಲಿ ಜಾಕ್ಸನ್ ಸಾವಿಗೆ ಮಾರಣಾಂತಿಕ ಪ್ರೊಪೊಫೋಲ್ ಔಷಧಿಯ ಡೋಸ್ ಸೇವಿಸಿದ್ದೇ ಕಾರಣವೆಂದು ಲಾಸ್ ಏಂಜಲ್ಸ್ ಕೌಂಟಿಯ ಮುಕ್ಯ ಕರೋನರ್ ಇಂಗಿತ ನೀಡಿದ್ದಾರೆ. ಮರ್ರೆ ವಾಲಿಯಂ ಸೇರಿದಂತೆ ಪ್ರೊಪೊಫೋಲ್ ಮತ್ತಿತರ ಔಷಧಗಳನ್ನು ಜೂ.25ರಂದು ಹೇಗೆ ನೀಡಿದರೆಂಬುದನ್ನು ದಾಖಲೆಗಳು ವರ್ಣಿಸಿದ್ದು, ಮರ್ರೆ ಹತ್ಯೆ ಆರೋಪಗಳನ್ನು ಎದುರಿಸುವ ಸಂಭವವಿದೆ.

ಸುಮಾರು 10 ನಿಮಿಷಗಳವರೆಗೆ ಮರ್ರೆ ಜಾಕ್ಸನ್ ಇದ್ದ ಸ್ಥಳವನ್ನು ಬಿಟ್ಟು ವಿಶ್ರಾಂತಿ ಕೋಣೆಗೆ ತೆರಳಿದರು. ಅವರು ಹಿಂತಿರುಗಿದಾಗ ಜಾಕ್ಸನ್ ಉಸಿರಾಟ ನಿಂತಿದ್ದನ್ನು ಮರ್ರೆ ಗಮನಿಸಿದರೆಂದು ತಿಳಿದುಬಂದಿದೆ. ಜಾಕ್ಸನ್‌ಗೆ ಮತ್ತೆ ಮರುಚೇತರಿಕೆಗೆ ಮರ್ರೆ ಯತ್ನಿಸಿ ಜಾಕ್ಸನ್ ದೇಹದಲ್ಲಿದ್ದ ನೋವುನಿವಾರಕ ಔಷಧಗಳ ಪರಿಣಾಮ ತಗ್ಗಿಸುವ ಔಷಧಿ ಫ್ಲುಮಾಜೆನಿಲ್ ನೀಡಿದರು. ಮರ್ರೆ ಸುಮಾರು 82 ನಿಮಿಷಗಳ ಕಾಲ ಕಾದರು.

ಆರಂಭದಲ್ಲಿ ಮರ್ರೆ ಪ್ಯಾರಾಮೆಡಿಕ್‌ಗಳಿಗೆ ಅಥವಾ ವೈದ್ಯರಿಗೆ ಜಾಕ್ಸನ್‌ಗೆ ಪ್ರೊಪೊಫೋಲ್ ಔಷಧಿ ನೀಡಿದ್ದನ್ನು ಹೇಳಿರಲಿಲ್ಲವೆಂದು ತನಿಖೆದಾರರು ತಿಳಿಸಿದ್ದಾರೆ. ಜಾಕ್ಸನ್ ಅವರನ್ನು ಕ್ಯಾಲಿಫೋರ್ನಿಯ ವಿವಿ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿ ಮೃತಪಟ್ಟರು.

ಫ್ಲುಮಾಜೆನಿಲ್ ನೀಡಿ ಜಾಕ್ಸನ್ ಚೇತರಿಕೆಗೆ ಮರ್ರೆ ಯತ್ನಿಸಿದರೆಂದು ದಾಖಲೆಗಳು ಸೂಚಿಸಿವೆ. ಆದರೆ ಪ್ರೊಪೋಫೋಲ್ ಪರಿಣಾಮವನ್ನು ತಕ್ಷಣಕ್ಕೆ ಶಮನಗೊಳಿಸುವ ಔಷಧಿಯಿಲ್ಲ ಎಂದು ಅರಿವಳಿಕೆ ತಜ್ಞ ರಾಬರ್ಟ್ ಕಿರ್ಬಿ ಹೇಳಿದ್ದಾರೆ. 911 ಸಂಖ್ಯೆಗೆ ಕರೆ ಮಾಡಲು 82 ನಿಮಿಷಗಳ ಕಾಲ ಕಾದಿದ್ದು, ವಿವರಣೆ ಕೊಡಲಾಗದ ಸಂಗತಿಯೆಂದು ತಜ್ಞರು ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ