ಮೆಕ್ಸಿಕೊದಲ್ಲಿ ಹಂದಿ ಜ್ವರದಲ್ಲಿ ಒಂದು ವಾರದಲ್ಲಿ ಇನ್ನೂ 15 ಜನರು ಸಾವಪ್ಪುವುದರೊಂದಿಗೆ ಸತ್ತವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆಯೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಅಮೆರಿಕ ಮತ್ತು ಅರ್ಜೈಂಟೈನಾ ಬಳಿಕ ಎಚ್1ಎನ್1 ರೋಗದ ಅತ್ಯಧಿಕ ಪ್ರಕರಣಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನ ಪಡೆದ ಮೆಕ್ಸಿಕೊದಲ್ಲಿ 20,681 ಮಂದಿ ರೋಗಪೀಡಿತರಾಗಿದ್ದಾರೆ. ಏಪ್ರಿಲ್‌ನಲ್ಲಿ ಸಾಂಕ್ರಾಮಿಕ ಆರಂಭವಾದ ದೇಶದ ಎಲ್ಲ ಪ್ರದೇಶಗಳಲ್ಲಿ ಹರಡಿದ್ದು, ಕೇಂದ್ರ ಮತ್ತು ದಕ್ಷಿಣ ಪ್ರದೇಶಗಳಿಗೆ ತೀವ್ರ ಹಾನಿ ತಟ್ಟಿದೆ.
ಮೆಕ್ಸಿಕೊ ಸುಮಾರು 20 ದಶಲಕ್ಷ ಹಂದಿ ಜ್ವರದ ಚುಚ್ಚುಮದ್ದುಗಳ ಖರೀದಿಗೆ 400 ದಶಲಕ್ಷ ಡಾಲರ್ ವಿಶ್ವಬ್ಯಾಂಕ್ ನೆರವನ್ನು ಕೋರಿದ್ದು, ನವೆಂಬರ್‌ನಲ್ಲಿ ಉಷ್ಣಾಂಶ ತಗ್ಗಿದ ಬಳಿಕ ವೈರಸ್ ನವಜೈತನ್ಯ ನಿರೀಕ್ಷಿಸಲಾಗಿದ್ದು, ಅದನ್ನು ಎದುರಿಸಲು ಸಿದ್ಧತೆ ಮಾಡಲಾಗುತ್ತಿದೆ.