ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001ರ ಸೆ.11ರಂದು ಮಾರಕ ದಾಳಿ ಯೋಜಿಸಿದ ದುಷ್ಕರ್ಮಿಗಳು ಇನ್ನೂ ಜೀವಂತವಾಗಿದ್ದು, ಇನ್ನಷ್ಟು ಭಯೋತ್ಪಾದನೆ ದಾಳಿಗಳಿಗೆ ಯೋಜಿಸಿದ್ದಾರೆಂದು ಅಮೆರಿಕದ ಉನ್ನತ ಮಿಲಿಟರಿ ಜನರಲ್ ತಿಳಿಸಿದ್ದಾರೆ. ಆ ಮಾರಕ ದಿನದಲ್ಲಿ ಕೈವಾಡ ನಡೆಸಿದವರು ಇನ್ನೂ ಸಜೀವವಾಗಿದ್ದಾರೆ.
ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ಸುರಕ್ಷಿತ ತಾಣದಲ್ಲಿ ತರಬೇತಿ, ಯೋಜನೆ ಹಮ್ಮಿಕೊಂಡಿದ್ದಾರೆಂದು ನೌಕಾದಳದ ಅಡ್ಮೈರಲ್ ಮತ್ತು ಜಂಟಿ ಸಿಬ್ಬಂದಿ ಮುಖ್ಯಸ್ಥ ಮೈಕ್ ಮುಲ್ಲನ್ ತಿಳಿಸಿದರು.ದೇಶ ಅಥವಾ ಉಭಯತ್ರರೂ ಉಗ್ರವಾದಿ ಸಿದ್ಧಾಂತದ ಹಿಡಿತಕ್ಕೆ ಬಲಿಪಶುವಾಗಲು ಅವರು ಬಯಸಿದ್ದಾರೆ.
ನಾವು ಒಂದು ಹಂತದವರೆಗೆ ಅವರಿಗೆ ಯಶಸ್ವಿಯಾಗಲು ಅವಕಾಶ ನೀಡಿದರೆ ನಾವು ಸ್ವತಃ ದುರ್ಬಲರಾಗುತ್ತೇವೆ ಎಂದು ಕೆಂಟುಕಿಯ ಲೂವಿಸ್‌ವಿಲ್ಲೆಯಲ್ಲಿ 91 ರಾಷ್ಟ್ರೀಯ ಅಮೆರಿಕನ್ ಸಮಾವೇಶದಲ್ಲಿ ಮುಲ್ಲನ್ ತಿಳಿಸಿದರು.
ಪ್ರಸಕ್ತ ಅಧ್ಯಕ್ಷರು ನೀಡಿರುವ ನನ್ನ ಯೋಜನೆಯಲ್ಲಿ ಅದು ಸಂಭವಿಸದಂತೆ ತಡೆಯುವುದು ಎಂದು ಮುಲ್ಲನ್ ಹೇಳಿದರು.ಪಾಕಿಸ್ತಾನ ಸ್ವತಃ ಉಗ್ರವಾದಿಗಳ ವಿರುದ್ಧ ಯುದ್ಧ ಸಾರಿದ್ದರೆ, ಆಫ್ಘಾನಿಸ್ತಾನದಲ್ಲಿ ಅಲ್ ಖಾಯಿದಾ ನಾಶಕ್ಕೆ ಅಂತಾರಾಷ್ಟ್ರೀಯ ಭದ್ರತಾ ಪಡೆ ನೇತೃತ್ವದಲ್ಲಿ ಸಮರ ಸಾರಲಾಗಿದೆಯೆಂದು ಅವರು ಹೇಳಿದರು. ನಾವು ಪಾಕಿಸ್ತಾನದ ಪ್ರಯತ್ನದಲ್ಲಿ ನೆರವಾಗಬೇಕು. ಆದ್ದರಿಂದ ಆ ಪ್ರದೇಶದ ಸಮಸ್ಯೆಗಳ ಪರಿಹಾರಕ್ಕೆ ಪಾಕಿಸ್ತಾನ-ಆಫ್ಘಾನಿಸ್ತಾನ ಜಂಟಿ ಘಟಕವನ್ನು ನಮ್ಮ ಸಿಬ್ಬಂದಿಯೊಳಗೇ ಸ್ಥಾಪಿಸಲು ಆದೇಶಿಸಿದ್ದಾಗಿ ಅವರು ನುಡಿದರು.