ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗುಂಡಿನ ಚಕಮಕಿ: 9 ಉಗ್ರರು, 4 ಪಾಕ್ ಸೈನಿಕರು ಬಲಿ (Gunbattle | Militants | Afghan | Taliban)
 
ಇಸ್ಲಾಮಾಬಾದ್: ಆಫ್ಘನ್ ಗಡಿಯ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ 9 ಉಗ್ರಗಾಮಿಗಳು ಮತ್ತು ನಾಲ್ವರು ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ. ದಕ್ಷಿಣ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಹಿರಿಯ ಕಮಾಂಡರ್ ಭದ್ರಕೋಟೆಯಲ್ಲಿ ಈ ಚಕಮಕಿ ಉಂಟಾಗಿದೆಯೆಂದು ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಗನ್‌ಷಿಪ್ ಬೆಂಬಲದೊಂದಿಗೆ ಸೇನಾಪಡೆಯು ಉಗ್ರಗಾಮಿಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದಾಗ ಈ ಚಕಮಕಿ ಉಂಟಾಯಿತು.

ಅಮೆರಿಕದ ಡ್ರೋನ್ ವಿಮಾನ ದಾಳಿಯಲ್ಲಿ ತಮ್ಮ ಮುಖಂಡ ಬೈತುಲ್ಲಾ ಮೆಹ್ಸೂದ್ ಸತ್ತಿದ್ದಾನೆಂದು ತಾಲಿಬಾನ್ ಕಮಾಂಡರ್‌ಗಳಿಬ್ಬರು ಒಪ್ಪಿಕೊಂಡ ಎರಡು ದಿನಗಳಲ್ಲೇ ಈ ಚಕಮಕಿ ನಡೆದಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ