ಪಾಕಿಸ್ತಾನದ ಸಂಸ್ಥಾಪಕ ಮುಹಮದ್ ಅಲಿ ಜಿನ್ನಾ ಅವರ ವಿವಾದಾತ್ಮಕ ಹೊಸ ಪುಸ್ತಕದ ಉದ್ಘಾಟನೆಗೆ ಪಾಕಿಸ್ತಾನಕ್ಕೆ ಬರುವಂತೆ ಜಸ್ವಂತ್ ಸಿಂಗ್ ಅವರಿಗೆ ಪಿಎಂಎಲ್-ಕ್ಯೂ ಪಕ್ಷ ಆಹ್ವಾನಿಸಿದೆ. ಇದು ಬೌದ್ಧಿಕತೆ ಮತ್ತು ಜನರಿಂದ ಜನರಿಗೆ ತಿಳಿವಳಿಕೆಗೆ ಪ್ರೋತ್ಸಾಹ ನೀಡುವತ್ತ ಹೆಜ್ಜೆಯೆಂದು ಅದು ತಿಳಿಸಿದೆ.
ಪಿಎಂಎಲ್-ಕ್ಯೂ ಪ್ರಧಾನಕಾರ್ಯದರ್ಶಿ ಜನರಲ್ ಮುಶಾಹಿತ್ ಹುಸೇನ್ ಸಯ್ಯದ್ ಅವರು ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಅವರ ಪುಸ್ತಕವನ್ನು ಕುರಿತು ಅಭಿನಂದಿಸಿದರು. ಇದೊಂದು ಮಹತ್ವದ ಮತ್ತು ಐತಿಹಾಸಿಕ ಕೃತಿಯಾಗಿದ್ದು, ಎಲ್ಲ ವಿವಾದಗಳಿಗೆ ನೇರ ಉತ್ತರ ನೀಡುತ್ತದೆಂದು ಹೇಳಿದ್ದಾರೆ.
ಇತಿಹಾಸದ ತಪ್ಪುಗಳನ್ನು ನಿಮ್ಮ ಪುಸ್ತಕ ಬದಲಿಸುತ್ತದೆ ಮತ್ತು ಸತ್ಯಕ್ಕೆ ಅವರ ಬದ್ಧತೆಯನ್ನು ಮತ್ತು ನೈತಿಕ ಸ್ಥೈರ್ಯವನ್ನು ಬಿಂಬಿಸುತ್ತದೆಂದು ಸಯ್ಯದ್ ಹೇಳಿದ್ದಾರೆ. ರಮ್ಜಾನ್ ಮಾಸದ ಬಳಿಕ ಪುಸ್ತಕದ ಉದ್ಘಾಟನೆಗೆ ಪಾಕಿಸ್ತಾನಕ್ಕೆ ಭೇಟಿ ನೀಡುವುದಾಗಿ ಸಿಂಗ್ ತಮಗೆ ತಿಳಿಸಿದರೆಂದು ಸಯ್ಯದ್ ಹೇಳಿದ್ದಾರೆ.