ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಿ-14ಕ್ಕೆ ವಿಸ್ತರಣೆ: ಸರ್ಕೋಜಿ ಯತ್ನಕ್ಕೆ ಜಪಾನ್ ಕೊಂಕು (Sarkozy | Japan | Tokyo | China)
 
ಶ್ರೀಮಂತ ರಾಷ್ಟ್ರಗಳ ಕೂಟವಾದ ಜಿ-8ನ್ನು 2011ರ ಪ್ಯಾರಿಸ್ ಶೃಂಗಸಭೆಯಲ್ಲಿ ಜಿ-14ಕ್ಕೆ ವಿಸ್ತರಿಸಿ ಪ್ರಮುಖ ಆರ್ಥಿಕ ಶಕ್ತಿಗಳಾದ ಭಾರತ ಮತ್ತು ಚೀನಾವನ್ನು ಸೇರ್ಪಡೆ ಮಾಡುವ ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಅವರ ಏಕಪಕ್ಷೀಯ ಯೋಜನೆಗೆ ಜಪಾನ್ ಗುರುವಾರ ಕೊಂಕು ಮಾತನ್ನಾಡಿದೆ. ಜಿ-14ಕ್ಕೆ ವಿಸ್ತರಿಸುವುದಾದರೆ ಯಾವ ಆಧಾರದ ಮೇಲೆ ವಿಸ್ತರಿಸಬೇಕೆಂಬುದನ್ನು ಸ್ಪಷ್ಪಪಡಿಸಬೇಕು.

ಜಿ-14 ಸೂಕ್ತ ಗಾತ್ರವೇ ಅಥವಾ ಅಲ್ಲವೇ ಎಂದು ವಿಚಾರ ವಿನಿಯಮದ ಮ‌ೂಲಕ ನಿರ್ಧರಿಸಬೇಕು ಎಂದು ಜಪಾನಿನ ಮುಖ್ಯ ಸಂಪುಟ ಕಾರ್ಯದರ್ಶಿ ಟಾಕಿಯೊ ಕವಾಮುರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಜುಲೈನಲ್ಲಿ ನಡೆದ ಜಿ-8 ಶೃಂಗಸಭೆಯಲ್ಲಿ, 'ಜಿ-8 ಸೂಕ್ತ ರೂಪವಲ್ಲ. ಜಿ-14ಕ್ಕೆ ವಿಸ್ತರಿಸುವುದರಿಂದ ಅದು ವಿಶ್ವದ ಆರ್ಥಿಕತೆಯ ಶೇ.80 ಪ್ರತಿನಿಧಿಸಲಿದ್ದು, ನಿಜವಾದ ಮಾತುಕತೆ ಸೃಷ್ಟಿಸುತ್ತದೆಂದು' ಇಟಲಿ ಅಧ್ಯಕ್ಷ ಬುರ್ಲುಸ್ಕೋನಿ ತಿಳಿಸಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ