ಮಯನ್ಮಾರ್ ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸಾನ್ ಸೂಕಿಯನ್ನು 18 ತಿಂಗಳವರೆಗೆ ಗೃಹಬಂಧನದಲ್ಲಿರಿಸಿದ ಕ್ರಿಮಿನಲ್ ಶಿಕ್ಷೆಯ ವಿರುದ್ಧ ಮುಂದಿನ ವಾರ ಮೇಲ್ಮನವಿ ಸಲ್ಲಿಸುವುದಾಗಿ ಸೂಕಿಯ ಪರ ವಕೀಲರು ತಿಳಿಸಿದ್ದಾರೆ.
64 ವರ್ಷ ವಯಸ್ಸಿನ ನೊಬೆಲ್ ಪ್ರಶಸ್ತಿ ಪುರಸ್ಕೃತೆಯನ್ನು ವಕೀಲರು ಎರಡು ಗಂಟೆಗಳ ಕಾಲ ಭೇಟಿ ಮಾಡಿ ಅವರ ಮೇಲ್ಮನವಿಯ ವಿವರಗಳನ್ನು ಅಂತಿಮಗೊಳಿಸಿದರೆಂದು ವಕೀಲರಲ್ಲಿ ಒಬ್ಬರಾದ ನ್ಯಾನ್ ವಿನ್ ತಿಳಿಸಿದ್ದಾರೆ. ಅಪೀಲಿನ ವಿವರ ನೀಡಲು ನಿರಾಕರಿಸಿದ ಅವರು, ಯಾಂಗಾನ್‌ನಲ್ಲಿ ವಿಭಾಗೀಯ ಕೋರ್ಟ್‌ನಲ್ಲಿ ಸೋಮವಾರ ಅಥವಾ ಮಂಗಳವಾರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಸೂಕಿಯವರು ಆಹ್ವಾನಿತರಲ್ಲದ ಅಮೆರಿಕದ ಪ್ರವಾಸಿಗೆ ಆಶ್ರಯ ನೀಡುವ ಮೂಲಕ ಷರತ್ತುಗಳನ್ನು ಉಲ್ಲಂಘಿಸಿದ ಸೂಕಿ ತಪ್ಪಿತಸ್ಥೆಯೆಂದು ಜಿಲ್ಲಾ ಕೋರ್ಟ್ ತೀರ್ಪು ನೀಡಿ, 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಆದರೆ ಮಿಲಿಟರಿ ಜುಂಟಾ ನಾಯಕ ಥಾನ್ ಶ್ವೆ ಆದೇಶದ ಮೇಲೆ 18 ತಿಂಗಳ ಗೃಹಬಂಧನಕ್ಕೆ ಇಳಿಸಲಾಗಿದೆ.