ಫ್ರಾಂಕ್ಫರ್ಟ್, ಶುಕ್ರವಾರ, 28 ಆಗಸ್ಟ್ 2009( 13:51 IST )
ಕಂಚಿನಿಂದ ನಿರ್ಮಿತವಾದ ಮತ್ತು ಚಿನ್ನದ ಹೊದಿಕೆಯುಳ್ಳ ರೋಮನ್ ಕುದುರೆಯ ತಲೆಯೊಂದು ಜರ್ಮನಿಯ ಪುರಾತತ್ವ ಸ್ಥಳದಲ್ಲಿ ಶೋಧಿಸಲಾಗಿದೆ.ಕುದುರೆಯ ಶಿರವು ಕುದುರೆ ಮತ್ತು ಸವಾರ ಪ್ರತಿಮೆಯ ಭಾಗವಾಗಿದ್ದು, ಆ ಕಾಲದಲ್ಲಿ ಅತ್ಯುತ್ತಮ ಗುಣಾತ್ಮಕ ಚಿತ್ರಗಳಲ್ಲಿ ಒಂದಾಗಿದೆಯೆಂದು ಹೆಸ್ಸೆ ಸ್ಟೇಟ್ ಪುರಾತತ್ವ ಶೋಧಕ ಎಗಾನ್ ಸ್ಕಾಲ್‌ಮೇಯರ್ ತಿಳಿಸಿದ್ದಾರೆ.
ಕೇಂದ್ರ ಜರ್ಮನಿಯ ವಾಲ್ಡ್‌ಗಿರ್ಮೆಸ್ ಪುರಾತತ್ವ ಉತ್ಖನನ ಸ್ಥಳದಲ್ಲಿ ಈ ತಿಂಗಳಾರಂಭದಲ್ಲಿ ಕುದುರೆಯ ಶಿರ ಪತ್ತೆಯಾಗಿದ್ದು, ಫ್ರಾಂಕ್‌ಪರ್ಟ್‌ನ ಜರ್ಮನ್ ಪುರಾತತ್ವ ಸಂಸ್ಥೆಯಲ್ಲಿ ಇಂದು ಪ್ರದರ್ಶಿಸಲಾಗಿದೆ. ಚಕ್ರವರ್ತಿ ಸೀಸರ್ ಆಗಸ್ಟಸ್ ಕಾಲಾವಧಿಯ ರೋಮನ್ ನಗರವಾಗಿದ್ದ ಈ ಸ್ಥಳದಲ್ಲಿ ಪುರಾತತ್ವ ಶೋಧಕರು 1993ರಿಂದ ಉತ್ಖನನ ಮಾಡುತ್ತಿದ್ದಾರೆ.