ಬ್ರೆಜಿಲ್‌ನಲ್ಲಿ ಹಂದಿ ಜ್ವರದ ಹೆಮ್ಮಾರಿಗೆ ಒಟ್ಟು 577 ಜನರು ಬಲಿಯಾಗಿದ್ದು, ಎಚ್1ಎನ್1 ವೈರಸ್ ಮಹಾಮಾರಿ ವರದಿಯಾದ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಅಮೆರಿಕ ರಾಷ್ಟ್ರವನ್ನು ಅಗ್ರಸ್ಥಾನದಲ್ಲಿರಿಸಿದೆಯೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಬ್ರೆಜಿಲ್‌ನಲ್ಲಿ ಸಾವಿನ ಪ್ರಮಾಣವು ಶೇ.0.29ರಷ್ಟಿದ್ದು, ಅರ್ಜೈಂಟಿನಾಗಿಂತ ಶೇ.1.08 ಕಡಿಮೆಯಿದೆ, ಚಿಲಿಯಲ್ಲಿ ಸಾವಿನ ಪ್ರಮಾಣ ಶೇ.0.75 ಮತ್ತು ಕೋಸ್ಟಾ ರಿಕಾದಲ್ಲಿ ಸಾವಿನ ಪ್ರಮಾಣ ಶೇ.0.67ರಷ್ಟಿದೆಯೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.ಬ್ರೆಜಿಲ್‌ನಲ್ಲಿ 577 ಜನರು ಹಂದಿಜ್ವರಕ್ಕೆ ಮೃತಪಟ್ಟಿದ್ದು ಅತ್ಯಧಿಕ ಪ್ರಮಾಣದಲ್ಲಿದ್ದರೆ, ಅಮೆರಿಕದಲ್ಲಿ 439, ಮೆಕ್ಸಿಕೊದಲ್ಲಿ 179 ಹಂದಿಜ್ವರಕ್ಕೆ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇದುವರೆಗೆ ಸುಮಾರು 5206 ಜನರು ಹಂದಿ ಜ್ವರ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹಂದಿ ಜ್ವರದ ವಿರುದ್ಧ 2.1 ಶತಕೋಟಿ ರಿಯಾಸ್(1.13 ಬಿಲಿಯನ್ ಡಾಲರ್) ಮೌಲ್ಯದ ಲಸಿಕೆಗಳ ಖರೀದಿಗೆ ಸರ್ಕಾರ ನಿರ್ಧರಿಸಿದೆಯೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.