ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಸ್ಲಿಂ ಜಗತ್ತಿಗೆ ಒಬಾಮಾ ರಮ್ಜಾನ್ ಸಂದೇಶ (Muslims | Ramadan | White House | Message)
 
ರಮ್ಜಾನ್ ಮಾಸದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಮುಸ್ಲಿಂ ಬಾಂಧವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಶ್ವೇತಭವನದ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾದ ವಿಡಿಯೊದಲ್ಲಿ ಅಧ್ಯಕ್ಷ ಒಬಾಮಾ ವಿಶ್ವಾದ್ಯಂತ ಮುಸ್ಲಿಂ ಬಾಂಧವರಿಗೆ ರಮ್ಜಾನ್ ಶುಭಾಶಯ ಹಾರೈಸಿದರು. ಅಧ್ಯಕ್ಷರ ರಮ್ಜಾನ್ ಅಭಿನಂದನೆಯು ಮುಸ್ಲಿಂ ಜಗತ್ತಿಗೆ ತಲುಪುವ ಹೊಸ ಪ್ರಯತ್ನವಾಗಿದೆ.

ಇರಾನಿನ ಹೊಸ ವರ್ಷ ನೌರುಝ್‌ನಲ್ಲಿ ವಿಡಿಯೊ ಅಭಿನಂದನೆಯನ್ನು ಒಬಾಮಾ ಸಲ್ಲಿಸಿ, ಬಳಿಕ ಕೈರೊದಲ್ಲಿ ಭಾಷಣ ಮಾಡಿದ್ದರು. ಅಮೆರಿಕ ಮತ್ತು ಮುಸ್ಲಿಂ ಜಗತ್ತಿನ ನಡುವೆ ನವಶಕೆಯ ಆರಂಭಕ್ಕೆ ತಾವು ಬದ್ಧವಾಗಿರುವುದಾಗಿ ಒಬಾಮಾ ಹೇಳಿದ್ದಾರೆ. ಪರಸ್ಪರ ಹಿತಾಸಕ್ತಿ ಮತ್ತು ಗೌರವದ ಆಧಾರದ ಮೇಲೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವನ್ನು ಮತ್ತು ಮುಸ್ಲಿಮರನ್ನು ತೊಡಗಿಸುವ ಅಮೆರಿಕದ ಬದ್ಧತೆಯ ಭಾಗವಾಗಿ ಇವೆಲ್ಲ ಪ್ರಯತ್ನಗಳೆಂದು ಒಬಾಮಾ ಸಂದೇಶದಲ್ಲಿ ತಿಳಿಸಿದ್ದಾರೆ.

ಚಾಂದ್ರಮಾನದ 9 ನೇ ತಿಂಗಳಾದ ಪ್ರತಿ ರಮ್ಜಾನ್‌ಗೆ ಮುಸ್ಲಿಮರು ಮುಂಜಾನೆಯಿಂದ ಸೂರ್ಯಾಸ್ತದರೆಗೆ 29 ಅಥವಾ 30 ದಿನಗಳ ಕಾಲ ಪ್ರತಿದಿನ ಉಪವಾಸ ಆಚರಿಸುತ್ತಾರೆ. ಅನೇಕ ಧರ್ಮಗಳಲ್ಲಿ ಆಧ್ಯಾತ್ಮಿಕತೆ, ಶಿಸ್ತು ಮತ್ತು ದೇವರ ದಯೆಯ ಪ್ರಜ್ಞೆ ಮ‌ೂಡಿಸಲು ಉಪವಾಸ ಒಂದು ಸಂಪ್ರದಾಯವಾಗಿ ಉಳಿದಿದೆ. ನತದೃಷ್ಟರಿಗೆ ದಾನ, ಧರ್ಮ ಮಾಡುವುದಕ್ಕೆ ರಮ್ಜಾನ್ ಸಕಾಲವಾಗಿದ್ದು, ಈ ಬೇಸಿಗೆಯಲ್ಲಿ ಅಮೆರಿಕದ ಮುಸ್ಲಿಮರು ದೇಶಾದ್ಯಂತ ಸಮುದಾಯಗಳ ಸೇವೆ ಸಲ್ಲಿಸಲು ಸಹಪೌರರ ಜತೆಗೂಡಿದ್ದಾರೆ.

ನೂತನ ಆರಂಭದ ಭಾಗವಾಗಿ, ಮುಸ್ಲಿಂ ಸಮುದಾಯಗಳ ಜತೆ ನಮ್ಮ ಸಂಬಂಧವು ರಾಜಕೀಯ ಮತ್ತು ಭದ್ರತಾ ಕಾಳಜಿಗಳ ಆಧಾರದ ಮೇಲೆ ಮಾತ್ರವಿಲ್ಲ. ನಿಜವಾದ ಸಹಭಾಗಿತ್ವಗಳಿಗೆ ಇತಿಹಾಸದುದ್ದಕ್ಕೂ ಮುಸ್ಲಿಂ ಸಮುದಾಯ ಆದ್ಯಪ್ರವರ್ತಕ ಪಾತ್ರವಹಿಸಿದ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಉದ್ಯಮಶೀಲತೆ ಕ್ಷೇತ್ರಗಳು ಸೇರಿದಂತೆ ಜನರ ನಿತ್ಯದಜೀವನದ ಮೇಲೆ ಧನಾತ್ಮಕ ವ್ಯತ್ಯಾಸ ತರುವ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಅಗತ್ಯವಿದೆಯೆಂದು ಅಧ್ಯಕ್ಷರು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ