ಹಿಂದು ಮಹಾಸಾಗರದಲ್ಲಿ ಜೂ.30ರಂದು ಅಪಘಾತಕ್ಕೀಡಾದ ಯೆಮೆನಿ ಏರ್ವೇಸ್ ವಿಮಾನದ ಹಾರಾಟ ಅಂಕಿಅಂಶ ರೆಕಾರ್ಡರ್ನ್ನು ಅಂತಾರಾಷ್ಟ್ರೀಯ ತನಿಖೆದಾರರು ಹೊರತೆಗೆದಿದ್ದಾರೆಂದು ಕಾಮ್ರೋಸ್ ಮೂಲದ ತನಿಖಾ ತಂಡ ತಿಳಿಸಿದೆ. ಯೆಮೆನಿ ರಾಜಧಾನಿ ಮೊರೊನಿ ತೀರದ ಜಲಗರ್ಭದಲ್ಲಿ ಕಪ್ಪು ಪೆಟ್ಟಿಗೆಯನ್ನು ಹೆಕ್ಕಿತೆಗೆಯಲಾಗಿದೆಯೆಂದು ತನಿಖಾ ತಂಡ ತಿಳಿಸಿದೆ.
ಧ್ವನಿಮುದ್ರಿಕೆಯನ್ನು ಹೊಂದಿರುವ ಇನ್ನೊಂದು ಪೆಟ್ಟಿಗೆ ಬಗ್ಗೆ ವಿವರಗಳನ್ನು ಒದಗಿಸಲಾಗಿಲ್ಲ. ಪ್ಯಾರಿಸ್ನಿಂದ ಮೊರೊನಿಗೆ ಯೆಮೆನ್ ಮೂಲಕ ತೆರಳುತ್ತಿದ್ದ ಯೆಮೆನಿಯ 626 ವಿಮಾನದ ಅಪಘಾತದಲ್ಲಿ 152 ಜನರು ಬಲಿಯಾಗಿದ್ದು, ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳು ಮಾತ್ರ ಬದುಕುಳಿದಿದ್ದಳು.ಫ್ರೆಂಚ್ ನೌಕೆಯೊಂದು ಗ್ರಾಂಡ್ ಕೊಮೊರಾಸ್ ದ್ವೀಪದ ವಾಯವ್ಯಕ್ಕೆ 9 ಮೈಲು ದೂರದಲ್ಲಿ 3900 ಅಡಿ ಆಳದಲ್ಲಿ ಹಾರಾಟ ಅಂಕಿಅಂಶ ಮತ್ತು ಕಾಕ್ಪಿಟ್ ರೆಕಾರ್ಡರ್ಗಳ ಸಂಕೇತಗಳನ್ನು ಗ್ರಹಿಸಿತು.
ಆದರೆ ಅವುಗಳನ್ನು ಹೊರತೆಗೆಯಲು ಆಳಸಮುದ್ರದ ಈಜುಗಾರಿಕೆ ಉಪಕರಣ ಅದರ ಬಳಿ ಇರಲಿಲ್ಲ.ಆ.29ರಂದು ವಿಶೇಷ ಜಲಗರ್ಭದ ರೊಬೋಟ್ನ್ನು ಹೊಂದಿದ್ದ ಫ್ರೆಂಚ್ ಹಡಗೊಂದು ವಿಮಾನದ ಕಪ್ಪುಪೆಟ್ಟಿಗೆ ಮತ್ತು ಇತರೆ ಅವಶೇಷಗಳಿಗಾಗಿ ಶೋಧ ಮುಂದುವರಿಸಿತು. ಫ್ರಾನ್ಸ್, ಯೆಮೆನ್ ಮತ್ತು ಕೊಮೊರಾಸ್ ತನಿಖೆದಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.