ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಮುಖ ಆರೋಪಿಗಳ ವಿರುದ್ಧ ಪಾಕ್ 26/11 ವಿಚಾರಣೆ (Lakhvi | Pakistan | 26/11 | Zarar Shah)
 
ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದ ಪಾಕಿಸ್ತಾನದ ಕೋರ್ಟೊಂದು 26/11 ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಶನಿವಾರ ಆರಂಭಿಸಿದೆ. ರಾವಲ್ಪಿಂಡಿಯ ಭಯೋತ್ಪಾದನೆ ನಿಗ್ರಹ ಕೋರ್ಟ್ 26/11 ಮುಖ್ಯ ಆರೋಪಿಗಳ ವಿರುದ್ಧ ವಿಚಾರಣೆ ಆರಂಭಿಸಿತು.

ಭಾರತವು 26/11 ಭಯೋತ್ಪಾದಕ ದಾಳಿಯ ಆರೋಪ ರುಜುವಾತುಪಡಿಸುವ ಹಲವಾರು ದಾಖಲೆಗಳನ್ನು ಒದಗಿಸಿದ್ದರೂ ಭಾರತದ ದಾಖಲೆಗಳು ತೃಪ್ತಿಕರವಾಗಿಲ್ಲ ಎಂದು ಸಬೂಬು ಹೇಳುತ್ತಾ ಪಾಕಿಸ್ತಾನ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಆದರೆ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ರಾವಲ್ಪಿಂಡಿಯ ಭಯೋತ್ಪಾದನೆ ನಿಗ್ರಹ ಕೋರ್ಟ್ ಪ್ರಮುಖ ಆರೋಪಿಗಳ ವಿರುದ್ಧ ವಿಚಾರಣೆ ಆರಂಭಿಸಿದೆ.

ಲಷ್ಕರೆ ತೊಯ್ಬಾ ರೂವಾರಿಗಳಾದ ಜಾಕಿವುರ್ ರೆಹ್ಮಾನ್ ಲಖ್ವಿ ಮತ್ತು ಝರಾರ್ ಶಾ ಕೂಡ ಮುಖ್ಯ ಆರೋಪಿಗಳಲ್ಲಿ ಸೇರಿದ್ದು, ಇದಕ್ಕೆ ಸಂಬಂಧಪಟ್ಟಂತೆ ಒಟ್ಟು ಐವರು ಆರೋಪಿಗಳ ಮೇಲೆ ಕೇಸು ದಾಖಲಿಸಲಾಗಿದೆ.ಕೋರ್ಟ್‌ಗೆ ತನ್ನ ವರದಿಗಳನ್ನು ನೀಡುವಂತೆ ವಿಚಾರಣೆ ನ್ಯಾಯಾಲಯವು ಫೆಡರಲ್ ತನಿಖಾ ಏಜೆನ್ಸಿಗೆ ತಿಳಿಸಿದೆ.

ಇದಕ್ಕೆ ಮುಂಚೆ ಇಂಟರ್‌ಪೋಲ್ ಹಫೀಜ್ ಸಯೀದ್, ಜಾಕಿವುರ್ ರೆಹ್ಮಾನ್ ಲಖ್ವಿ ಮತ್ತು ಅಬು ಅಲ್ ಖಾಮಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಈಗಾಗಲೇ ಜಾರಿ ಮಾಡಿದೆ. ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರೂ ಮುಂಬೈ ದಾಳಿಗಳ ಕಾರಣಕರ್ತರ ವಿರುದ್ಧ ಇಸ್ಲಾಮಾಬಾದ್ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಭಾರತ ಆರೋಪಿಸಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ