ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಿಕ್ಕಿರಿದ ಹಡಗು ನೀರುಪಾಲು: ಐವರ ಸಾವು (Indonesia | Ferry | Sari Mulia | Jakarta)
 
ಕಿಕ್ಕಿರಿದು ತುಂಬಿದ್ದ ಹಡಗೊಂದು ಇಂಡೊನೇಶಿಯ ತೀರದಲ್ಲಿ ನೀರುಪಾಲಾಗಿದ್ದು, ಐವರು ಅಸುನೀಗಿದ್ದಾರೆ ಮತ್ತು ಕನಿಷ್ಠ 19 ಜನರು ನಾಪತ್ತೆಯಾಗಿದ್ದಾರೆಂದು ಪೊಲೀಸ್ ಮತ್ತು ಮಾಧ್ಯಮ ವರದಿಗಳು ಶನಿವಾರ ತಿಳಿಸಿದೆ. ಸಾರಿ ಮುಲಿಯ ಹಡಗು ನೆಗಾರಾದಿಂದ ಬಂಜಾರ್‌ಮಾಸಿನ್ ಕಡೆ ತೆರಳುತ್ತಿದ್ದಾಗ ಶುಕ್ರವಾರ ರಾತ್ರಿ ನೀರುಪಾಲಾಯಿತು ಎಂದು ಪೊಲೀಸ್ ಸಾರ್ಜಂಟ್ ಎಡಿ ತಿಳಿಸಿದರು.

ಸುಮಾರು 100ಕ್ಕೂ ಹೆಚ್ಚು ಜನರನ್ನು ಪಾರುಮಾಡಲಾಗಿದ್ದು, ಐವರು ಅಸುನೀಗಿದ್ದಾರೆ. ಇನ್ನೂ 18 ಜನರು ನಾಪತ್ತೆಯಾಗಿದ್ದು, ಅಪಘಾತಕ್ಕೆ ಕಾರಣವನ್ನು ಪೊಲೀಸರು ಇನ್ನೂ ತನಿಖೆ ನಡೆಸಿದ್ದಾರೆ. ಹಡಗಿನಲ್ಲಿ ಕಿಕ್ಕಿರಿದು ಪ್ರಯಾಣಿಕರು ತುಂಬಿದ್ದರಿಂದ ಮುಳುಗಿದ್ದಾಗಿ ಅಧಿಕೃತ ಅಂಟಾರಾ ಸುದ್ದಿಸಂಸ್ಥೆ ತಿಳಿಸಿದೆ.

ಹಡಗು ಕನಿಷ್ಠ 132 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸಾಗಿಸುತ್ತಿದ್ದು, ಬಂಜಾರ್‌ಮಾಸಿನ್‌ಗೆ 100 ಕಿಮೀ ದೂರದಲ್ಲಿ ಮುಳುಗಿದೆ. ನಾಪತ್ತೆಯಾದ ಪ್ರಯಾಣಿಕರು ಮುಳುಗಿದ ಹಡಗಿನಲ್ಲಿ ಸಿಕ್ಕಿಬಿದ್ದಿದ್ದಾರೆಂದು ಶೋಧ ಮತ್ತು ರಕ್ಷಣೆ ಮುಖ್ಯಸ್ಥ ಅಬಿಡಿನ್ ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ