ಹಿರಿಯ ಸೆನೆಟ್ ಸದಸ್ಯ ಎಡ್ವರ್ಡ್ ಕೆನಡಿ ವಿರ್ಜಿನಿಯ ಸಮಾಧಿ ಸ್ಥಳದಲ್ಲಿ ಅವರ ಸೋದರರ ಸಮಾಧಿಗಳ ಪಕ್ಕದಲ್ಲೇ ಚಿರನಿದ್ರೆ ಅಪ್ಪಿದ್ದಾರೆ. ಅಮೆರಿಕದ ಪ್ರಖ್ಯಾತ ಕೆನಡಿ ಕುಟುಂಬದ ವಂಶಸ್ಥರಾದ ಎಡ್ವರ್ಡ್ ಕೆನಡಿಯನ್ನು ನಮ್ಮ ಕಾಲದ ಮಹಾನ್ ಸದಸ್ಯರೆಂದು ಅಧ್ಯಕ್ಷ ಬರಾಕ್ ಒಬಾಮಾ ಬಣ್ಣಿಸಿದ್ದಾರೆ.
ಮೆದುಳು ಕ್ಯಾನ್ಸರ್ನಿಂದ 77ರ ಪ್ರಾಯಕ್ಕೆ ಸುದೀರ್ಘ ಜೀವನ್ಮರಣ ಹೋರಾಟದ ಬಳಿಕ ಅಸುನೀಗಿದ ಕೆನಡಿ ಅವರ ಪಾರ್ಥಿವ ಶರೀರವನ್ನು ಆರ್ಲಿಂಗ್ಟನ್ ನ್ಯಾಷನಲ್ ಸಮಾಧಿ ಸ್ಥಳದಲ್ಲಿ ಖಾಸಗಿ ವಿಧಿವಿಧಾನದ ನಡುವೆ ಸಮಾಧಿ ಮಾಡಲಾಯಿತು.
ಸೆನೆಟ್ ಸಿಂಹ ಎಂದು ಅಚ್ಚುಮೆಚ್ಚಿನಿಂದ ಕರೆಯಲ್ಪಡುತ್ತಿದ್ದ ಟೆಡ್ ಅವರನ್ನು ಮಾಜಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಮತ್ತು ಸೆನೆಟರ್ ರಾಬರ್ಟ್ ಕೆನಡಿ ಅವರ ಸಮಾಧಿಗಳ ಪಕ್ಕದಲ್ಲೇ ಹೂಳಲಾಯಿತು.