ಕೊಲಂಬಿಯ ಅಧ್ಯಕ್ಷ ಅಲ್ವಾರೊ ಯುರೈಬ್ ಅವರು ಮಹಾಮಾರಿ ಹಂದಿ ಜ್ವರದ ಸೋಂಕಿಗೆ ಒಳಗಾಗಿದ್ದಾರೆ. 57 ವರ್ಷ ವಯಸ್ಸಿನ ಯುರೈಬ್ ಅವರಿಗೆ ಹಂದಿ ಜ್ವರದ ರೋಗ ಅತ್ಯಂತ ಅಪಾಯಕಾರಿಯಾಗಿ ಉಲ್ಬಣಿಸಿಲ್ಲ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಸಾಮಾಜಿಕ ರಕ್ಷಣೆ ಸಚಿವ ಡೀಗೊ ಪೆಲೆಸಿಯೊ ತಿಳಿಸಿದ್ದಾರೆ.
ಅವರಿಗೆ ಅಧ್ಯಕ್ಷೀಯ ಅರಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಜೈಂಟಿನಾದ ಬಾರಿಲೋಚೆಯಲ್ಲಿ ದಕ್ಷಿಣ ಅಮೆರಿಕ ಮುಖಂಡರ ಶೃಂಗಸಭೆಯಲ್ಲಿ ಭಾಗವಹಿಸಿದ ದಿನವಾದ ಶುಕ್ರವಾರದಂದೇ ಅವರು ಸೋಂಕಿಗೆ ಗುರಿಯಾಗಿದ್ದಾರೆಂದು ಪೆಲೆಸಿಯೊ ತಿಳಿಸಿದ್ದಾರೆ.
ಕೊಲಂಬಿಯದಲ್ಲಿ ಹಂದಿ ಜ್ವರದ 621 ಪ್ರಕರಣಗಳು ವರದಿಯಾಗಿದ್ದು, 29 ಜನರು ಅಸುನೀಗಿದ್ದಾರೆಂದು ಸಾಮಾಜಿಕ ರಕ್ಷಣೆ ಸಚಿವಾಲಯ ತಿಳಿಸಿದೆ.