ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವೈಮಾನಿಕ ಕಸರತ್ತು: ಪೈಲಟ್‌ಗಳ ಜೀವಕ್ಕೆ ಕುತ್ತು (Poland | Pilots |Warsaw, Footage)
 
ಮಧ್ಯ ಪೋಲಂಡ್‌ನಲ್ಲಿ ಏರ್ ಶೋ ಸಂದರ್ಭದಲ್ಲಿ ಬೆಲೂರಸ್ ಸಮರ ಜೆಟ್ ವಿಮಾನ ಅಪಘಾತಗೊಂಡು ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸತ್ತಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.ವಾರ್ಸಾ ದಕ್ಷಿಣಕ್ಕೆ 105 ಕಿಮೀ ದೂರದಲ್ಲಿ ರಾಡೊಂ ಉತ್ಸವದಲ್ಲಿ ವೈಮಾನಿಕ ಕಸರತ್ತುಗಳನ್ನು ನಡೆಸುತ್ತಿದ್ದ ಸು-27 ಜೆಟ್ ವಿಮಾನ ಅಪಘಾತಕ್ಕೀಡಾಯಿತು.

ಪೋಲೆಂಡ್ ರಾಜ್ಯ ಟೆಲಿವಿಷನ್‌ ಚಿತ್ರದಲ್ಲಿ ವಿಮಾನವು ಥಟಕ್ಕನೇ ತಿರುಗಿಕೊಂಡು ಮರಗಳ ಹಿಂದೆ ಕುಸಿದುಬಿದ್ದಿದ್ದರಿಂದ ಬೃಹತ್ ಕಾರ್ಮೋಡ ಕವಿದಿದ್ದು ಗೋಚರಿಸಿದೆ. ಅಪಘಾತದಲ್ಲಿ ಇಬ್ಬರು ಬೆಲೂರಸ್ ಪೈಲಟ್‌ಗಳು ಸತ್ತಿದ್ದಾರೆಂದು ಏರ್ ಶೋ ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜೆಟ್ ವಿಮಾನದ ಎಂಜಿನ್‌ನಲ್ಲಿ ಹಕ್ಕಿಗಳು ಸಿಕ್ಕಿಹಾಕಿಕೊಂಡಿದ್ದರಿಂದ ಅಪಘಾತ ಸಂಭವಿಸಿದೆಯೆಂದು ಬೆಲೂರಸ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಕಸರತ್ತಿನ ಪ್ರದರ್ಶನದ ಸಂದರ್ಭದಲ್ಲಿ ವಿಮಾನದ ಎಂಜಿನ್‌ನಲ್ಲಿ ಹಕ್ಕಿಗಳು ಸಿಕ್ಕಿಬಿದ್ದಿದ್ದರಿಂದ ವಿಮಾನ ನಿಯಂತ್ರಣ ಕಳೆದುಕೊಂಡರೂ ಪೈಲಟ್‌ಗಳು ವಿಮಾನವನ್ನು ದೂರಕ್ಕೆ ಒಯ್ಯುವ ಮ‌ೂಲಕ ತಮ್ಮ ಜೀವವನ್ನೇ ಒತ್ತೆಯಿಟ್ಟು ಭಾರೀ ಸಾವು, ನೋವನ್ನು ತಪ್ಪಿಸಿದರು ಎಂದು ಸಚಿವಾಲಯದ ವಕ್ತಾರ ವ್ಯಾಚೆಸ್ಲಾವ್ ರೆಮೆನ್‌ಚುಕ್ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳನ್ನು ಕರ್ನಲ್ ಅಲೆಕ್ಸಾಂಡರ್ ಮಾರ್ಫಿಟ್‌ಸ್ಕಿ ಮತ್ತು ಜುರಾವಲೆವಿಕ್ ಎಂದು ಅವರು ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ