ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭ್ರಷ್ಟಾಚಾರ: ಮಾಜಿ ಪ್ರಧಾನಿ ಒಲ್ಮರ್ಟ್ ತಪ್ಪಿತಸ್ಥ (Israel | Olmert | Tax evasion | Fraud)
 
ವಂಚನೆ, ವಿಶ್ವಾಸ ದ್ರೋಹ ಮತ್ತು ತೆರಿಗೆ ವಂಚನೆ ಸೇರಿದಂತೆ ಭ್ರಷ್ಟಾಚಾರಗಳ ಆರೋಪದ ಮೇಲೆ ಇಸ್ರೇಲ್ ಮಾಜಿ ಪ್ರಧಾನಮಂತ್ರಿ ಎಹುದ್ ಒಲ್ಮರ್ಟ್ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದ್ದು, ದೇಶದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪಗಳನ್ನು ಎದುರಿಸಿದ ಪ್ರಥಮ ಮಾಜಿ ಪ್ರಧಾನಮಂತ್ರಿ ಎನಿಸಿದ್ದಾರೆ.

ವಂಚನೆ, ವಿಶ್ವಾಸ ದ್ರೋಹ, ಕಾರ್ಪೋರೇಟ್ ದಾಖಲೆಗಳು ತಿದ್ದಿದ ಮತ್ತು ತೆರಿಗೆ ವಂಚನೆ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆಯೆಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.ಕೆಲವು ತಿಂಗಳುಗಳ ಕಾಲ ಆಲ್ಮರ್ಟ್ ವಿರುದ್ಧ ವಿಚಾರಣೆ ಬಳಿಕ, ಮ‌ೂರು ಪ್ರಕರಣಗಳಲ್ಲಿ ಅವರನ್ನು ತಪ್ಪಿತಸ್ಥರನ್ನಾಗಿಸಲಾಗಿದೆ.

ಅಮೆರಿಕದ ಉದ್ಯಮಿ ಮೋರಿಸ್ ತಲಾನ್ಸ್ಕಿ ಅವರಿಂದ ನಗದು ಲಕೋಟೆಗಳನ್ನು ಸ್ವೀಕರಿಸಿದ್ದು ಮೊದಲ ಪ್ರಕರಣ. ರಿಶನ್ ಟೂರ್ಸ್ ಮ‌ೂಲಕ ದತ್ತಿಸಂಸ್ಥೆಗಳು ಮತ್ತು ಸರ್ಕಾರದ ಸಚಿವಾಲಯದ ಪರವಾಗಿ ಬುಕ್ ಮಾಡಲಾದ ಫ್ಲೈಟ್‌ಗಳಿಗೆ ಇಮ್ಮಡಿ ಬಿಲ್ಲಿಂಗ್ ಮಾಡಿದ್ದಲ್ಲದೇ ಪ್ರವಾಸದ ವೆಚ್ಚಗಳ ಸುಳ್ಳು ರಸೀದಿಗಳನ್ನು ನೀಡಿದ್ದರೆಂದು ಆರೋಪಿಸಲಾಗಿದೆ.

ಹೆಚ್ಚುವರಿ ಹಣವನ್ನು ವೈಯಕ್ತಿಕ ಮತ್ತು ಕುಟುಂಬದ ವಿದೇಶಿ ಪ್ರವಾಸಗಳಿಗೆ ವೆಚ್ಚ ಮಾಡಿದರೆಂದು ಹೇಳಲಾಗಿದೆ. ಮ‌ೂರನೇ ಪ್ರಕರಣದಲ್ಲಿ ಕಂಪೆನಿಯೊಂದರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ಹಳೆಯ ಕಾನೂನು ಪಾಲುದಾರ ಯ‌ೂರಿ ಮೆಸ್ಸರ್‌ಗೆ ವೈಯಕ್ತಿಕ ಅನುಕೂಲಗಳನ್ನು ಒಲ್ಮರ್ಟ್ ಕಲ್ಪಿಸಿದರೆಂದು ಹೇಳಲಾಗಿದೆ.ಒಲ್ಮರ್ಟ್ ಭ್ರಷ್ಟಾಚಾರ ಪ್ರಕರಣಗಳ ಮಧ್ಯೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದು, ನೆತಾನ್ಯೂ ಮಾರ್ಚ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ತನಕ ಉಸ್ತುವಾರಿಯಾಗಿ ಮುಂದುವರಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ