ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೋರ್ಟ್‌ಗೆ ಹಾಜರಾಗದ ಮುಷರಫ್‌ಗೆ ನೋಟಿಸ್ (Karachi | Muttahida | Musharraf | Sindh)
 
ಎರಡು ವರ್ಷಗಳ ಕೆಳಗೆ ವಕೀಲರ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್‌‍ಗೆ ಹಾಜರಿಯಾಗಲು ವಿಫಲರಾದ ಮಾಜಿ ಅಧ್ಯಕ್ಷ ಮುಷರಫ್ ಮತ್ತು ಮುತ್ತಾಹಿದಾ ಖಾಮಿ ಆಂದೋಳನದ ಮುಖ್ಯಸ್ಥ ಅಲ್ತಾಫ್ ಹುಸೇನ್ ಅವರಿಗೆ ಹೊಸದಾಗಿ ಪಾಕಿಸ್ತಾನ ಕೋರ್ಟೊಂದು ನೋಟಿಸ್‌ಗಳನ್ನು ನೀಡಿದೆ. ಮುಷರಫ್, ಹುಸೇನ್, ಮಾಜಿ ಪ್ರಾಂತೀಯ ಒಳಾಡಳಿತ ಸಚಿವ ವಾಸೀಮ್ ಅಕ್ತರ್ ಮತ್ತಿತರರಿಗೆ ಸೋಮವಾರ ಹಾಜರಾಗುವಂತೆ ಸಿಂಧ್ ಹೈಕೋರ್ಟ್ ಆ.20ರಂದು ನೋಟಿಸ್‌‍ಗಳನ್ನು ನೀಡಿತ್ತು.

ಆದರೆ ಮುಷರಫ್ ಅಥವಾ ಅವರ ಪರ ವಕೀಲರಾಗಲಿ ಕೋರ್ಟ್‌ಗೆ ಹಾಜರಾಗಿಲ್ಲ ಮತ್ತು ಹುಸೇನ್ ಪರ ಕೂಡ ಇಂದಿನ ವಿಚಾರಣೆಯಲ್ಲಿ ಯಾರೂ ಪ್ರಾತಿನಿಧ್ಯ ವಹಿಸಿಲ್ಲ. ಹುಸೇನ್ ಮತ್ತು ಮುಷರಫ್ ಪ್ರಸಕ್ತ ಲಂಡನ್‌ನಲ್ಲಿ ವಾಸಿಸುತ್ತಿದ್ದು, ಅವರಿಬ್ಬರಿಗೆ ಹೊಸ ನೋಟಿಸ್‌ಗಳನ್ನು ಇಬ್ಬರು ನ್ಯಾಯಾಧೀಶರ ಪೀಠ ಜಾರಿ ಮಾಡಿದೆ.

ಕರಾಚಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಇಫ್ತಿಕರ್ ಚೌಧರಿ ಭೇಟಿ ವಿಫಲಗೊಳಿಸಿದ್ದರ ವಿರುದ್ಧ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಮನವಿಯೊಂದು ಮತ್ತು ಅದಕ್ಕೆ ಸಂಬಂಧಿಸಿದ 3 ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ಮುಷರಫ್ ಅವರನ್ನು ಪ್ರತಿವಾದಿಯಾಗಿ ಹೆಸರಿಸಲಾಗಿತ್ತು. ಎಂಕ್ಯೂಎಂ ಕಾರ್ಯಕರ್ತರ ವಿರುದ್ಧ ಚೌಧರಿ ಬೆಂಬಲಿಗರು ಮತ್ತು ಪಿಪಿಪಿಯ ಹಿಂಸಾಚಾರದಲ್ಲಿ 40 ಜನರು ಅಸುನೀಗಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ