ನೇಪಾಳಕ್ಕೆ ಕರ್ನಾಟಕದ ಅರ್ಚಕರು, ಸ್ಥಳೀಯರಿಂದ ಭಾರೀ ವಿರೋಧ!
ಕಾಠ್ಮಂಡು, ಮಂಗಳವಾರ, 1 ಸೆಪ್ಟೆಂಬರ್ 2009( 09:19 IST )
ಇಲ್ಲಿನ ಪ್ರಸಿದ್ಧ ಪಶುಪತಿನಾಥ ದೇವಸ್ಥಾನಕ್ಕೆ ಕರ್ನಾಟಕ ಮೂಲದ ಅರ್ಚಕರಾದ ಗಿರೀಶ್ ಭಟ್ ಹಾಗೂ ರಾಘವೇಂದ್ರ ಭಟ್ ಅವರು ನೇಮಕವಾಗುವ ಸಾಧ್ಯತೆಗಳಿದ್ದು, ಇವರನ್ನು ಆಯ್ಕೆ ಮಾಡುವಂತೆ ದೇಗುಲ ಆಡಳಿತ ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಭಾರತೀಯ ಮೂಲದ ಅರ್ಚಕರ ನೇಮಕ ಕುರಿತು ಕಾಠ್ಮಂಡುವಿನಲ್ಲಿ ಸ್ಥಳೀಯ ಮಾವೋವಾದಿಗಳಿಂದ ತೀವ್ರ ಪ್ರತಿಭಟನೆ ನಡೆದಿದ್ದು, ಸ್ಥಳೀಯರನ್ನೇ ಅರ್ಚಕರಾಗಿ ನೇಮಕ ಮಾಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಆಡಳಿತ ಮಂಡಳಿಗೆ ಎಚ್ಚರಿಸಿದ್ದಾರೆ.