ಲಾಸ್ ಏಂಜಲ್ಸ್, ಮಂಗಳವಾರ, 1 ಸೆಪ್ಟೆಂಬರ್ 2009( 11:42 IST )
ಫ್ಯಾಷನ್ ವಿನ್ಯಾಸಕ ಆನಂದ್ ಜಾನ್ ಅಲೆಕ್ಸಾಂಡರ್ ಅವರಿಗೆ ಲಾಸ್‌ಏಂಜಲ್ಸ್‌ನಲ್ಲಿ ರೂಪದರ್ಶಿ ಅಭಿಲಾಷೆಯ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 59 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.
ಯುವತಿಯರು ಮತ್ತು ಮಹಿಳೆಯರನ್ನು ತನ್ನ ಕಾಮಪಿಪಾಸೆಗಾಗಿ ಬಳಸಿಕೊಂಡ ಆನಂದ್ ಜಾನ್ ತನ್ನ ಅಪರಾಧಕ್ಕೆ ಯಾವುದೇ ಪಶ್ಚಾತ್ತಾಪದ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಬಲಪ್ರಯೋಗದ ಅತ್ಯಾಚಾರ ಸೇರಿದಂತೆ 14 ಪ್ರಕರಣಗಳಲ್ಲಿ ಆನಂದ್ ಜಾನ್ ತಪ್ಪಿತಸ್ಥನಾಗಿದ್ದನು.
ನ್ಯಾಯಾಧೀಶರು ಆನಂದ್ ಜಾನ್ ಅಪರಾಧಗಳನ್ನು ನೆನಪಿಸಿದಾಗ ಅಲ್ಲಿ ನೆರೆದಿದ್ದ 13 ಮಂದಿ ಮಹಿಳೆಯರು ಕಣ್ಣೀರು ಹರಿಸಿದರು. ಶಿಕ್ಷೆಯ ಸ್ವರೂಪ ಪ್ರಕಟಿಸುತ್ತಿದ್ದಂತೆ ಪರಸ್ಪರ ಕೈಜೋಡಿಸಿದರು. ಒಬ್ಬಳ ಮುಖದಲ್ಲಿ ಕಣ್ಣೀರ ಕೋಡಿಯೇ ಹರಿಯಿತು.ಇನ್ನೊಬ್ಬಳು ಅಲೆಕ್ಸಾಂಡರ್‌ನತ್ತ ತಿರಸ್ಕಾರದ ನೋಟ ಹರಿಸಿದಳು.14ರ ಪ್ರಾಯದಲ್ಲೇ ನನ್ನ ಯೌವನವನ್ನು, ನನ್ನ ಕನಸನ್ನು ಅವನ ಕಾಮತೃಷೆಗೆ ಬಲಿತೆಗೆದುಕೊಂಡನೆಂದು ಮಹಿಳೆಯೊಬ್ಬಳು ಉದ್ಗರಿಸಿದಳು.
ಲೈಂಗಿಕ ದೌರ್ಜನ್ಯಕ್ಕೀಡಾದ ದುರ್ದೈವಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆನಂದ್ ಜಾನ್ ಮಹಿಳೆಯರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿ, ರಂಗು, ರಂಗಿನ ಛಾಯಾಚಿತ್ರಗಳು ಮತ್ತು ಇತರೆ ರೂಪದರ್ಶಿ ಕೆಲಸಗಳನ್ನು ನೀಡುವ ಭರವಸೆಯ ಮೇಲೆ ಬೆವರ್ಲಿ ಹಿಲ್ಸ್ ನಿವಾಸದಲ್ಲಿ ಅತ್ಯಾಚಾರವೆಸಗುತ್ತಿದ್ದನೆಂದು ಪ್ರಾಸಿಕ್ಯೂಟರ್‌ಗಳು ಆಪಾದಿಸಿದ್ದರು.