ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಷ್ಯಾ ಸಮರನೌಕೆ ಅಪಹರಣದಲ್ಲಿ ಪಾಕಿಗಳ ಕೈವಾಡ (Moscow | Russian Warship | Hijack | Somali)
 
ಸೊಮಾಲಿ ಕಡಲ್ಗಳ್ಳರು ರಷ್ಯಾದ ಸಮರನೌಕೆಯನ್ನು ಅಪಹರಣ ಮಾಡಿದ ಘಟನೆಯ ತನಿಖೆಯಲ್ಲಿ ಪಾಕಿಸ್ತಾನದ ಪೌರರು ಅಪಹರಣದಲ್ಲಿ ಪ್ರಧಾನ ಪಾತ್ರವಹಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸೊಮಾಲಿ ಕಡಲ್ಗಳ್ಳರ ಜತೆ 12 ಪಾಕಿಸ್ತಾನಿಯರನ್ನು ಬಂಧಿಸಲಾಗಿದ್ದು, ರಷ್ಯಾದ ಆರೋಪಗಳ ಬಗ್ಗೆ ಪಾಕಿಸ್ತಾನ ಇದುವರೆಗೆ ತನಿಖೆ ಆರಂಭಿಸಿಲ್ಲ ಮತ್ತು ಬಂಧಿತರಾದ 12 ಮಂದಿ ಮೀನುಗಾರರು ಎಂದು ಕೂಡ ಹೇಳಿದೆ.

ಸೊಮಾಲಿ ಕಡಲ್ಗಳ್ಳರ ಜತೆ ಪಾಕಿಸ್ತಾನ ಪೌರರು ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದು, ಕಡಲ್ಗಳ್ಳರು ಮತ್ತು ಶಂಕಿತ ಭಯೋತ್ಪಾದಕ ಗುಂಪುಗಳ ಜತೆ ಸಂಭವನೀಯ ಸಖ್ಯದ ಬಗ್ಗೆ ಆತಂಕಗಳನ್ನು ಸೃಷ್ಟಿಸಿದೆ. ಕಳೆದ ಏಪ್ರಿಲ್ 28ರಂದು ಸೊಮಾಲಿಯ ತೀರದಲ್ಲಿ ಟ್ಯಾಂಕರ್‌ವೊಂದರ ಮೇಲೆ ಆಕ್ರಮಣಕ್ಕೆ ಯತ್ನಿಸಿದ 12 ಪಾಕ್ ಪೌರರನ್ನು ಸೊಮಾಲಿ ಕಡಲ್ಗಳ್ಳರ ಜತೆ ರಷ್ಯಾ ಸಮರನೌಕೆ ಬಂಧಿಸಿದಾಗ ಪಾಕ್ ಪೌರರ ಕೈವಾಡ ಬೆಳಕಿಗೆ ಬಂತು.

ಪಾಕಿಸ್ತಾನದ ಪೌರರು ಕಡಲ್ಗಳ್ಳತನದಲ್ಲಿ ಪ್ರಮುಖ ಪಾತ್ರವಹಿಸಿದ್ದರೆಂದು ತನಿಖೆಯಿಂದ ಗೊತ್ತಾಗಿದ್ದು, ಅವರ ಗುರುತುಪತ್ರಗಳು ಮತ್ತು ಸಾಕ್ಷ್ಯಾಧಾರರಿಂದ ಪೌರತ್ವ ದೃಢಪಟ್ಟಿದೆ. ರಷ್ಯಾದ ಯುದ್ಧನೌಕೆ ಅಡ್ಮೈರಲ್ ಪೆಂಟೆಲೆ‌ಯೆವ್‌ಗೆ ಸೊಮಾಲಿ ತೀರದ ಪೂರ್ವಕ್ಕೆ 120 ಕಿಮೀ ದೂರದಲ್ಲಿ ಬುಲ್ವಾಯಿ ಬ್ಯಾಂಕ್ ಟ್ಯಾಂಕರ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕರೆ ಬಂದಿತು.

ಸೊಮಾಲಿ ಕಡಲ್ಗಳ್ಳರಿಂದ ಟ್ಯಾಂಕರ್ ದಾಳಿಗೆ ಗುರಿಯಾಗಿತ್ತು. ರಷ್ಯಾ ಕಮಾಂಡೊಗಳು ಕಾರ್ಯಾಚರಣೆ ನಡೆಸಿ ಈ ಪ್ರಯತ್ನವನ್ನು ವಿಫಲಗೊಳಿಸಿದರು. ಕಡಲ್ಗಳ್ಳರ ಸ್ಪೀಡ್‌ಬೋಟ್‌ಗಳಿಗೆ ಇನ್ನೊಂದು ಮಾತೃನೌಕೆಯೊಂದು ಮಾರ್ಗದರ್ಶನ ನೀಡುತ್ತಿತ್ತೆಂದು ಹೇಳಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ