ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾರ್ಗಿಲ್ ಸಮರ: ಕಟ್ಟುಕಥೆ ಹೆಣೆದ ಮುಷರಫ್ (Musharraf | Pakistan | Kargil | Fabricated)
 
PTI
PTI
ಕಾರ್ಗಿಲ್ ಯುದ್ಧದ ಬಗ್ಗೆ ಆಗಿನ ಸೇನಾ ಜನರಲ್ ಪರ್ವೇಜ್ ಮುಷರಫ್ ಅವರು ಪಾಕಿಸ್ತಾನ ಪಡೆಗಳಿಗೆ ಮತ್ತು ಜನತೆಗೆ ಕಟ್ಟು ಕತೆಗಳನ್ನು ಹೇಳುತ್ತಿದ್ದರೆಂದು ನಿಯಂತ್ರಣ ರೇಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಪಾಕಿಸ್ತಾನದ ಹಿರಿಯ ಕಮಾಂಡರ್‍ವೊಬ್ಬರು ಬಹಿರಂಗಪಡಿಸಿದ್ದಾರೆ.

ಕಾರ್ಗಿಲ್ ಸಂಘರ್ಷದ ಆರಂಭದ ಹಂತದಲ್ಲಿ ಮುಷರಫ್, ಮೆಹ್ಮೂದ್ ಮತ್ತು ಅವರ ಭಟ್ಟಂಗಿಗಳು ತಾವು ಅಸಾಧ್ಯವೆಂದು ಎಣಿಸಿದ ಕೆಲಸವನ್ನು ಅವರು ಸಾಧಿಸಿದರೆಂಬ ಭಾವನೆ ಪ್ರದರ್ಶನಕ್ಕೆ ಯತ್ನಿಸಿದರೆಂದು ಕ್ವೆಟ್ಟಾ ಕಾರ್ಪ್ಸ್ ಕಮಾಂಡರ್ ಲೆ.ಜನರಲ್ (ನಿವೃತ್ತ) ತಾರಿಖ್ ಪರ್ವೇಜ್ ತಿಳಿಸಿದ್ದಾರೆ.ಸಮವಸ್ತ್ರದಲ್ಲಿರುವ ಪ್ರತಿ ಪಾಕಿಸ್ತಾನಿ ಬಯಸಿದಂತೆ ಭಾರತೀಯರು ಸೋಲಪ್ಪಿದರೆ ತಮಗೂ ಸಂತೋಷವೆಂಬ ಸಂದೇಶವನ್ನು ತಾವು ಮುಟ್ಟಿಸಿದ್ದಾಗಿ ಅವರು ಹೇಳಿದ್ದಾರೆ.

ಆದರೆ ಸೇನಾಪಡೆಗಳಿಗೆ ಮತ್ತು ಸಾರ್ವಜನಿಕರಿಗೆ ಕಪೋಲಕಲ್ಪಿತ ಕಥೆಗಳನ್ನು ಸೃಷ್ಟಿಸಿ ಮುಷರಫ್ ದಾರಿ ತಪ್ಪಿಸಿದರೆಂದು ಅವರು ಹೇಳಿದರು.ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿ ಸೈನಿಕರ ಸಾವುನೋವಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು ಮತ್ತು ಕಟ್ಟಡ ಬಂಕರ್‌ಗಳ ಬಗ್ಗೆ ಹೇಳಿಕೆ ಸುಳ್ಳೆಂದು ಸಾಬೀತಾಯಿತು ಎಂದು ತಾರಿಖ್ ಹೇಳಿದರು. ಜಯ ಖಾತರಿಗೆ ಅಥವಾ ಸೈನಿಕರ ಜೀವರಕ್ಷಣೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲವೆಂದು ಅವರು ಹೇಳಿದ್ದಾಗಿ ವರದಿಯಾಗಿದೆ.

ಕಾರ್ಗಿಲ್ ಯುದ್ಧದ ಕುರಿತು ನಡೆದ ಪತ್ರಿಕಾಸಂದರ್ಶನದಲ್ಲಿ ಮುಷರಫ್ ತಮ್ಮ ಯಶಸ್ಸುಗಳ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದರು. ಆದಾಗ್ಯೂ, ತಾವು ಆ ಸಭೆಗಳಲ್ಲಿ ಕಮಾಂಡರ್‌ನ ತಮ್ಮ ಸುದೀರ್ಘ ಅನುಭವಗಳನ್ನು ನೀಡಲು ಬಯಸಿದ್ದೆ. ತಮ್ಮ ಅನುಭವಗಳಿಂದ ಸೇನೆ ಅನುಕೂಲ ಪಡೆಯಲು ತಾವು ಆಸಕ್ತರಾಗಿದ್ದಾಗಿ ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ