ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಮುಷರ್ರಫ್ ಹಾಗೂ ಹಾಲಿ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ಅವರಿಗೆ ಸ್ಥಳೀಯ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಭುಟ್ಟೋ ಹತ್ಯೆಯಲ್ಲಿ ಇವರಿಬ್ಬರ ಪಾತ್ರವಿದೆ ಎಂದು ಆರೋಪಿಸಿ ಭುಟ್ಟೋ ಸಹವರ್ತಿಯೊಬ್ಬರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೆ.28ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಮುಷ್ ಹಾಗೂ ಮಲಿಕ್ ಅವರಿಗೆ ಸೂಚಿಸಿದೆ.
ಪಿಪಿಪಿ ಪಕ್ಷದ ವರಿಷ್ಠೆ, ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಕುರಿತು ಈಗಾಗಲೇ ಎಫ್‌ಬಿಐ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದೆ. ಆದರೆ ಈವರೆಗೂ ಹತ್ಯೆಯ ಹಿಂದಿನ ರೂವಾರಿಗಳು ಯಾರು ಎಂಬ ಮಾಹಿತಿ ಈವರೆಗೂ ಹೊರಬಿದ್ದಿಲ್ಲ. ಏತನ್ಮಧ್ಯೆ ಭುಟ್ಟೋ ಹತ್ಯೆ ವಿಚಾರಣೆ ಕುರಿತಂತೆ ಹೊಸ ತಂತ್ರ ಅನುಸರಿಸಿರುವುದಾಗಿ ತನಿಖಾಧಿಕಾರಿಗಳ ತಂಡ ಇತ್ತೀಚೆಗಷ್ಟೇ ತಿಳಿಸಿತ್ತು.