ಪಾಕ್ ಮೂಲದ ಲಷ್ಕರ್ ಎ ತೊಯ್ಬಾ ಹಾಗೂ ಜಮಾತ್ ಉದ್ ದಾವಾ ಸಂಘಟನೆಯ ಉಗ್ರರು ಎಷ್ಟು ಕುಖ್ಯಾತರು ಎಂಬುದು ವಿಶ್ವಕ್ಕೆ ಗೊತ್ತು. ಅದರಲ್ಲೂ ಮುಂಬೈ ಮೇಲೆ ದಾಳಿಯ ರೂವಾರಿ, ಜಮಾತ್ ಉದ್ ದಾವಾ ಸಂಘಟನೆಯ ಹಫೀಜ್ ಸಹೀದ್ ಭಾರತದ ಪೊಲೀಸರಿಗೆ ಬೇಕಾದ ಉಗ್ರರ ಪೈಕಿ ಒಬ್ಬ.
ಅಚ್ಚರಿಯೆಂದರೆ ಪಾಕಿಸ್ತಾನ 10ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯೊಂದನ್ನು ತಯಾರಿಸಿದ್ದು ಅದರಲ್ಲಿ ಲಷ್ಕರ್ ಅಥವಾ ಜಮಾತ್ ಉದ್ ದಾವಾ ಸಂಘಟನೆಯ ಒಬ್ಬನೇ ಒಬ್ಬ ಉಗ್ರನ ಹೆಸರಿಲ್ಲ. ಪಟ್ಟಿಯಲ್ಲಿ ಅಲ್ ಖಾಯಿದಾ, ತಾಲಿಬಾನ್ ಸೇರಿದಂತೆ ಕೆಲ ಉಗ್ರ ಸಂಘಟನೆಗಳಿಗೆ ಸೇರಿದೆ ವ್ಯಕ್ತಿಗಳ ಹೆಸರು ಮಾತ್ರ ಇದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಈವರೆಗೂ ಇಬ್ಬಗೆ ನೀತಿ ತೋರುತ್ತಾ ಬಂದಿದೆ. ಆದರೂ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದ ಒತ್ತಡದ ನಂತರ ಉಗ್ರರ ತನ್ನ ನೆಲದವರು, ಅವರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.