ಇಸ್ಲಾಮಾಬಾದ್, ಬುಧವಾರ, 2 ಸೆಪ್ಟೆಂಬರ್ 2009( 17:07 IST )
ತಾಲಿಬಾನ್‌ನ ಹೊಸ ನಾಯಕ ಹಕಿಮುಲ್ಲಾ ಸಾವನ್ನಪ್ಪಿದ್ದಾನೆ ಎಂಬುದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಈತ ವಲಿ ಉರ್ ರೆಹ್ಮಾನ್ ಜತೆಗಿನ ಉತ್ತರಾಧಿಕಾರ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ ಎಂಬುದಾಗಿ ಪಾಕಿಸ್ತಾನಿ ಅಧಿಕಾರಿಗಳು ಒಂದು ತಿಂಗಳ ಹಿಂದೆ ಹೇಳಿದ್ದರು. ಅದು ಹಕಿಮುಲ್ಲಾನಂತೆಯೇ ರೂಪ ಹೊಂದಿರುವ ಆತನ ಸಹೋದರ ಎಂಬುದಾಗಿ ಪಾಕ್ ಮಾಧ್ಯಮಗಳು ಅಭಿಪ್ರಾಯಿಸಿದ್ದವು. ಹಕಿಮುಲ್ಲಾ ಕೆಲವು ದಿನಗಳ ಹಿಂದೆ ಬಿಬಿಸಿಗೆ ಸಂದರ್ಶನ ನೀಡಿದ್ದ.
ಹಕಿಮುಲ್ಲಾನ ಸಹೋದರನಿಗೆ ನಿಷೇಧಿಕ ತೆಹ್ರಿಕ್-ಇ-ತಾಲಿಬಾನ್‌ನ ನಾಯಕತ್ವ ವಹಿಸಲು ಆಫ್ಘಾನಿಸ್ತಾನದಿಂದ ಕರೆ ಬಂದಿತ್ತು. ತಾಲಿಬಾನ್ ನಾಯಕ ಮುಲ್ಲಾ ಒಮರ್ ಮುಖ್ಯಸ್ಥನ ನೇಮಕದ ನಿರ್ಧಾರ ಕೈಗೊಂಡಿದ್ದ.
ತಾಲಿಬಾನ್ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಆತ ಬದುಕಿದ್ದಾನೆ ಎಂಬ ಭ್ರಮೆ ಹುಟ್ಟಿಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಹೇಳಿವೆ.
ಕಳೆದ ತಿಂಗಳಿನಲ್ಲಿ ಸಂಭವಿಸಿದ್ದ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ಸಾವು ತಾಲಿಬಾನ್‌ಗೆ ದೊಡ್ಡ ಹೊಡೆತ ನೀಡಿತ್ತು.