ನ್ಯೂಯಾರ್ಕ್, ಬುಧವಾರ, 2 ಸೆಪ್ಟೆಂಬರ್ 2009( 19:37 IST )
ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಭಾರತದ ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಂಭವಿಸಿದೆ.
ನರೇಶ್ ಡಚ್ಚಾ(22) ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ, ರೂಟ್ ನಂ.22ರ ಹೆದ್ದಾರಿಯಲ್ಲಿ ವೇಗವಾಗಿ ಕಾರಿನಲ್ಲಿ ಚಲಿಸುತ್ತಿದ್ದ ಈತ ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಈತನ ಸ್ನೇಹಿತ ವರುಣ್ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಅಪಘಾತದಲ್ಲಿ ವರುಣ್‌ಗೆ ಗಾಯಗಳಾಗಿವೆ ಎಂದು ಅಲ್ಲಿನ ಸಮುದಾಯ ಕಾರ್ಯಕರ್ತ ಪ್ರಸನ್ನ ತೊಟ್ಟಾಕುರ ಎಂಬುವರು ತಿಳಿಸಿದ್ದಾರೆ.
ಡಚ್ಚಾ ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ಭುವನಗಿರಿಯ ಅರೋರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಪದವಿ ಪಡೆದು ಕಳೆದ ಜನವರಿಯಲ್ಲಿ ಅಮೆರಿಕದ ರೈಟ್ ಸ್ಟೇಟ್ ಯೂನಿರ್ವಸಿಟಿಯಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ್ದ. ಉತ್ತರ ಅಮೆರಿಕದಲ್ಲಿರುವ ತೆಲುಗು ಸಂಘ ವಿದ್ಯಾರ್ಥಿಯ ಮೃತ ದೇಹವನ್ನು ಹೈದರಾಬಾದ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ.